ಅಂಬರೀಶ್ ಮಾಡಿದ ಕೆಲಸವನ್ನೇ ಮಾಡಿದ ಪುತ್ರ ಅಭಿಷೇಕ್

ಗುರುವಾರ, 13 ಡಿಸೆಂಬರ್ 2018 (09:45 IST)
ಬೆಂಗಳೂರು: ಅಂಬರೀಶ್ ತೀರಿಕೊಂಡು 15 ದಿನಗಳಾಗಿವೆಯಷ್ಟೇ. ಅಪ್ಪ ತೀರಿಕೊಂಡ ದುಃಖ ಮನಸ್ಸಲ್ಲಿರುವಾಗಲೇ ಪುತ್ರ ಅಭಿಷೇಕ್ ತಮ್ಮ ಕರ್ತವ್ಯ ನಿಭಾಯಿಸಲು ಹಾಜರಾಗಿದ್ದಾರೆ.


ತಮ್ಮ ಚೊಚ್ಚಲ ಅಭಿನಯದ ‘ಅಮರ್’ ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಬಾಕಿಯಿದ್ದು, ಅಂಬರೀಶ್ ತೀರಿಕೊಂಡಿದ್ದರಿಂದ ಕೆಲವು ದಿನ ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದೀಗ ಚಿತ್ರತಂಡಕ್ಕೆ ತಮ್ಮಿಂದ ತೊಂದರೆಯಾಗುವುದು ಬೇಡವೆಂದು ಅಭಿ ದುಃಖ ಮರೆತು ಬೆಂಗಳೂರಿನಲ್ಲಿ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಅಪ್ಪನ ಫೋಟೋ ಹಿಡಿದು ಶೂಟಿಂಗ್ ಗೆ ಹೊರಟ ಅಭಿ ಫೈಟಿಂಗ್ ದೃಶ್ಯದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅಭಿ ‘ಮತ್ತೆ ಕೆಲಸಕ್ಕೆ ಮರಳುತ್ತಿದ್ದೇನೆ. ನನ್ನ ತಂದೆ ರೆಬೆಲ್ ನನ್ನನ್ನು ನೋಡುತ್ತಿದ್ದಾರೆ’ ಎಂದು ಅಂಬರೀಶ್ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ನಿಂತಿರುವ ಫೋಟೋ ಪ್ರಕಟಿಸಿದ್ದಾರೆ.

ಅಂಬರೀಶ್ ಕೂಡಾ ತಮ್ಮ ತಂದೆ ಸಾವಿನ ಮರುದಿನವೇ ಚಿತ್ರ ತಂಡಕ್ಕೆ ತೊಂದರೆಯಾಗುವುದು ಬೇಡವೆಂದು ಚಿತ್ರೀಕರಣಕ್ಕೆ ಹಾಜರಾಗಿದ್ದರು. ಇದೀಗ ಅವರ ಪುತ್ರ ಕೂಡಾ ಅವರದ್ದೇ ಹಾದಿಯಲ್ಲಿ ನಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ