ನಿವೇದಿತಾಗೆ ಬೇರೊಬ್ಬ ವ್ಯಕ್ತಿ ಜತೆ ಸಂಬಂಧ, ಸ್ಪಷ್ಟನೆ ನೀಡಿದ ಚಂದನ್‌ ಶೆಟ್ಟಿ

sampriya

ಸೋಮವಾರ, 10 ಜೂನ್ 2024 (17:42 IST)
Photo By Instagram
ಬೆಂಗಳೂರು: ವಿಚ್ಛೇದನದ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ವೈರಲ್ ಆಗುತ್ತಿರುವ ಬೆನ್ನಲ್ಲೇ ನಟ, ಗಾಯಕ‌ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದರು.

ಚಂದನ್ ಶೆಟ್ಟಿ ಮಾತನಾಡಿ, ಇದೇ ಜೂನ್ 6 ರಂದು ನಿವೇದಿತಾ ಹಾಗೂ ನಾನು ದೂರವಾಗಲು ಅರ್ಜಿ ಸಲ್ಲಿಸಿದ್ದೇವು. ಅದರಂತೆ 7ನೇ ತಾರೀಖಿನಂದು  ಫ್ಯಾಮೀಲಿ ಕೋರ್ಟ್‌ ನಮ್ಮ ಅರ್ಜಿಯನ್ನು ಕಾನೂನಯತಾತ್ಮಕವಾಗಿ‌ ಕ್ರಮ ವಹಿಸಿ ವಿಚ್ಛೇಧನ ಕೊಟ್ಟಿದೆ ಎಂದರು.

ಇನ್ನೂ ನಮ್ಮ ವಿಚ್ಛೇದನದ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿದೆ. ನಾವು ವಿಚ್ಛೇದನ ಪಡೆಯಲು ಮುಖ್ಯ ಕಾರಣ ಬೆಳೆದು ಬಂದ ರೀತಿ ಎಂದರು.

 ನಿವೇದಿತಾ ಅವರು ಬೆಳೆದು ಬಂದ ರೀತಿ, ಜೀವನ ಶೈಲಿ ಒಂದು ಆಯಾಮದಲ್ಲಿ ಹೋದರೆ, ನನ್ನ ಜೀವನ‌ ಶೈಲಿ ಬೇರೊಂದು ಅಯಾಮದಲ್ಲಿದೆ. ಅವರು ರಾತ್ರಿ ಪ್ರಿಯರಾದರೆ ನಾನು ಬೇಗ ಎದ್ದೇಳಲು ಬಯಸುವವ. ಹೀಗೇ ನಮ್ಮ‌ ಜೀವನ‌ ಶೈಲಿಯಲ್ಲಿ ತಾಳೆಹಾಕುತ್ತಾ ಹೋದಾಗ ಅಲ್ಲಿ ಹೊಂದಾಣಿಕೆ ಆಗುತ್ತಿರಲಿಲ್ಲ.

ಹೀಗಿರುವಾಗ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಬದುಕಲು ಪ್ರಯತ್ನಿಸಿದೆವು. ಅದು ಸಾಧ್ಯವಾಗಲಿಲ್ಲ. ಕೊನೆಗೆ ಇಬ್ಬರು ಖುಷಿಯಾಗಿರಬೇಕೆಂಬ ದೃಷ್ಟಿಯಿಂದ ವಿಚ್ಛೇದನ ಪಡೆಯುವ ತೀರ್ಮಾನ ಮಾಡಿದೆವು.

ನಾವಿಬ್ಬರು ಒಮ್ಮತದಿಂದ ದೂರವಾಗಿದ್ದೇವೆ.  ಇನ್ನೂ ಮುಂದಿನ‌ ದಿನಗಳಲ್ಲೂ ನಮ್ಮ‌‌ ಕೆಲಸಗಳಿಗೆ ಬೆಂಬಲಿಸುತ್ತೇವೆ ಎಂದರು.

ಇನ್ನೂ ನಿವೇದಿತಾಗೆ‌ ಬೇರೊಬ್ಬ ವ್ಯಕ್ತಿ ಜತೆ ಸಂಬಂಧ ಕಲ್ಪಿಸಿದ್ದು ತುಂಬಾನೇ ನೋವು ಉಂಟು ಮಾಡಿದೆ. ನಾನು ನಿವೇದಿತಾ ಜತೆಯಾಗಿ ಅವರ ಫ್ಯಾಮಿಲಿ ಜತೆ ಪಾರ್ಟಿ ಹಾಗೂ ಪ್ಯಾಮಿಲಿ ಸಮಾರಂಭಗಳಲ್ಲಿ ಭಾಗವಹಿಸಿದ್ದೇವು. ಅವರಿಗೂ ಒಂದು ಕುಟುಂಬ ಇರುವಾಗ ಇಂತಹ ವದಂತಿ ಹಬ್ಬಿಸುವ ಕೆಲಸ ಮಾಡಬಾರದು.  

ಇನ್ನೂ ನಿವೇದಿತಾ ಗೌಡ ಅವರು ಮಾತನಾಡಿ, ನಾನು‌ ಚಂದನ್ ಅವರು ವೈಯಕ್ತಿಕ ಕಾರಣಗಳಿಂದ ದೂರವಾಗುತ್ತಿದ್ದೇವೆ. ಇನ್ನೂ ಒಬ್ಬ ವ್ಯಕ್ತಿ ಜತೆ ಸಂಬಂಧ ಕಲ್ಪಿಸುತ್ತಿರುವ ನ್ಯೂಸ್ ನೋಡಿ ಆಘಾತಕ್ಕೊಳಗಾದೆ. ಅವರ ಕುಟುಂಬಕ್ಕೆ‌ ಕರೆ ಮಾಡಿ ಮಾತುಕತೆ ನಡೆಸಿದ. ಅವರು‌ ನನಗೆ ಸಮಾಧಾನ ಹೇಳಿದರು ಎಂದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ