ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

Sampriya

ಮಂಗಳವಾರ, 21 ಅಕ್ಟೋಬರ್ 2025 (16:25 IST)
Photo Credit X
ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಕ್ಕೆ ಮೊದಲ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಒಂದೇ ದಿನ ದೊಡ್ಮನೆಗೆ ಕಾಲಿಟ್ಟಿದ್ದಾರೆ. 

ಮೊದಲ ದಿನವೇ ಹವಾ ಎಬ್ಬಿಸಿರುವ ವೈಲ್ಡ್‌ ಕಾರ್ಡ್ ಸ್ಪರ್ಧಿಗಳ ಮಾತಿಂದ್ದ ಕೋಲಾಹಲ ಸೃಷ್ಟಿಯಾಗಿದೆ. ಇನ್ನು ಆರಂಭದಿಂದಲೂ ಉತ್ತಮ ಸ್ನೇಹಿತರಾಗಿದ್ದ ಜಾಹ್ನವಿ ಹಾಗೂ ಅಶ್ವಿನಿ ಗೌಡ ಅವರ ಮಧ್ಯೆ ಬಂದಿರುವ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಅಸಮಾಧಾನವನ್ನು ಹೊರಹಾಕಿದ್ದಾರೆ. 

ಇನ್ನೂ ಅಶ್ವಿನಿ ಅವರು ಜಾಹ್ನವಿ ಅವರನ್ನು ಬಳಸಿಕೊಳ್ಳುತ್ತಿದ್ದಾರೆಂದು ರಿಷಿ ಕಿವಿಮಾತು ಹೇಳಿದ್ದಾರೆ. 

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಜಾಹ್ನವಿಗೆ ರಿಷಾ ಕೆಲವೊಂದು ಕಿವಿಮಾತು ಹೇಳಿದ್ದಾರೆ. ರಿಷಾ ಮಾತನ್ನು ಕೇಳಿದ ಜಾಹ್ನವಿ ಅವರು ಅಶ್ವಿನಿ ಗೌಡ ಹಾಗೂ ಕಾವ್ಯ ಗೌಡ ಮುಂದೆ ಅತ್ತಿದ್ದಾರೆ.

ಕಲರ್ಸ್ ಕನ್ನಡದ ಪ್ರೋಮೋದಲ್ಲಿ ಏನಿದೆ: 
ಬಿಗ್‌ಬಾಸ್‌ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ರಿಷಾ ಅವರು ಜಾಹ್ನವಿ ಮುಂದೆ ಪುಕ್ಕ ಥರನೇ ಇದ್ದು ಬಿಟ್ರೆ ಜಾಹ್ನವಿ ಕಳೆದು ಹೋಗುತ್ತಾರೆ. ಸಾಕಷ್ಟು ಕೆಲಸ ಮಾಡಬೇಕು ಎಂದು ಕನಸು ಕಟ್ಟಿಕೊಂಡು ಬಂದಿರುತ್ತೀರಾ. ಈಗ ನಿಮಗೆ ನೀವೇ ಮುಳ್ಳಾಗುತ್ತಿದ್ದೀರಾ ಎಂದು ಅನಿಸುತ್ತಿದೆ’ ಅಂತ ಹೇಳಿದ್ದಾರೆ. 

ಇದಾದ ಬಳಿಕ ಜಾಹ್ನವಿ ‘ನನ್ನ ಗುಂಡಿನಾ ನಾನೇ ತೋಡಿಕೊಳ್ಳುತ್ತಿದ್ದೇನೆ ಎಂದು ಅನಿಸುತ್ತದೆ’ ಅಂತ ಕಣ್ಣೀರಿಟ್ಟಿದ್ದಾರೆ. ಆಗ ಅಶ್ವಿನಿ ಗೌಡ ಎಷ್ಟೇ ಸಮಾಧಾನ ಮಾತುಗಳನ್ನು ಆಡಿದರು ಜಾಹ್ನವಿ ಅಳುತ್ತಲೇ ಇದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ