ಮಗುವಿಗೆ ನಾವಿನ್ನೂ ರೆಡಿಯಾಗಿಲ್ಲ ಎಂದ ಚಂದನ್ ಶೆಟ್ಟಿ

ಬುಧವಾರ, 11 ಜನವರಿ 2023 (09:27 IST)
Photo Courtesy: Twitter
ಬೆಂಗಳೂರು: ರಾಪರ್, ನಟ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇತ್ತೀಚೆಗೆ ಮಾಡಿದ ರೀಲ್ಸ್ ನಿಂದಾಗಿ ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಆದರೆ ಈ ಬಗ್ಗೆ ಈಗ ಚಂದನ್ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ. ಚಂದನ್ ಮತ್ತು ನಿವೇದಿತಾ ಫ್ಯಾಟ್ ಪ್ಲಸ್ ಹರ್ ಎಂಬ ಶಬ್ಧ ಜೊತೆಗೂಡಿದರೆ ಏನಾಗುತ್ತದೆ? ಎಂದು ರೀಲ್ಸ್ ಮಾಡಿದ್ದರು. ಅಷ್ಟಕ್ಕೇ ನಿವೇದಿತಾ ಗರ್ಭಿಣಿ ಇರಬಹುದು ಎಂದು ಸುದ್ದಿ ಹಬ್ಬಿತ್ತು.

ಇದೀಗ ಚಂದನ್ ನಾವು ಮಗು ಮಾಡಿಕೊಳ್ಳಲು ಇನ್ನೂ ರೆಡಿಯೇ ಆಗಿಲ್ಲ. ನಾನು ತಂದೆಯಾಗುತ್ತಿಲ್ಲ. ಅದು ರೀಲ್ಸ್ ಅಷ್ಟೇ ಎಂದು ಚಂದನ್ ಸ್ಪಷ್ಟನೆ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ