ಯಶ್ 19 ನಂತೇ ಕಿಚ್ಚ 46 ನೇ ಸಿನಿಮಾಗೆ ಕಾಯುತ್ತಿರುವ ಫ್ಯಾನ್ಸ್
ಅವರಂತೇ ಕಿಚ್ಚ ಸುದೀಪ್ ಅಭಿಮಾನಿಗಳೂ ತಮ್ಮ ಮೆಚ್ಚಿನ ನಟನ ಮುಂದಿನ ಸಿನಿಮಾ ಘೋಷಣೆಗಾಗಿ ಕಾಯುತ್ತಿದ್ದಾರೆ. ಸುದೀಪ್ ತಮ್ಮ 46 ನೇ ಸಿನಿಮಾ ಯಾವುದು ಎಂದು ಇನ್ನೂ ಘೋಷಿಸಿಲ್ಲ.
ವಿಕ್ರಾಂತ್ ರೋಣ ಬಳಿಕ ಸುದೀಪ್ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಕಬ್ಜ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರಷ್ಟೆ. ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ ಜೊತೆಗೇ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಜೊತೆಗೆ ಅವರೇ ನಿರ್ದೇಶನಕ್ಕಿಳಿಯುವುದಾಗಿ ಹೇಳಿದ್ದರು. ಅದರ ಸುದ್ದಿಯೂ ಬಂದಿಲ್ಲ. ಈ ತಿಂಗಳ ಅಂತ್ಯಕ್ಕೆ ಕಿಚ್ಚ ಸುದೀಪ್ ಸಿನಿ ರಂಗಕ್ಕೆ ಬಂದ ದಿನವಾಗಿದೆ. ಹೀಗಾಗಿ ಕಿಚ್ಚ 46 ನೇ ಸಿನಿಮಾ ಘೋಷಣೆ ಈ ತಿಂಗಳ ಅಂತ್ಯಕ್ಕೆ ಘೋಷಣೆಯಾಗಬಹುದೇ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.