ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ-ನಿವೇದಿತಾ

ಬುಧವಾರ, 26 ಫೆಬ್ರವರಿ 2020 (09:01 IST)
ಬೆಂಗಳೂರು: ಬಿಗ್ ಬಾಸ್ ಶೋ ಮೂಲಕ ಒಂದಾದ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿವಾಹ ಸಮಾರಂಭ ಇಂದು ಮೈಸೂರಿನಲ್ಲಿ ನಡೆಯುತ್ತಿದೆ. ನಿನ್ನೆ ನಡೆದ ಆರತಕ್ಷತೆ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.


ಇಂದು ಬೆಳಗಿನ 8.15 ರ ಮುಹೂರ್ತದಲ್ಲಿ ಚಂದನ್-ನಿವೇದಿತಾ ತಾಳಿ ಶಾಸ್ತ್ರ ನೆರವೇರಿದೆ. ಮೈಸೂರು ಮೂಲದವರಾದ ನಿವೇದಿತಾ ಮತ್ತು ಚಂದನ್ ಶೆಟ್ಟಿ ವಿವಾಹ ಪೂರ್ವ ಕಾರ್ಯಕ್ರಮಗಳು ನಿನ್ನೆಯಿಂದಲೇ ಆರಂಭವಾಗಿತ್ತು. ಅದರ ಜತೆಗೆ ಈ ಸುಂದರ ಜೋಡಿಯ ರೊಮ್ಯಾಂಟಿಕ್ ಹಾಡೊಂದು ನಿನ್ನೆ ಸಂಜೆ ಲಾಂಚ್ ಆಗಿದೆ.

ಮದುವೆ ಸಮಾರಂಭಕ್ಕೆ ಎರಡೂ ಕುಟುಂಬಸ್ಥರು ಮತ್ತು ಸಿನಿ ಗಣ್ಯರೂ ಆಗಮಿಸಲಿದ್ದಾರೆ. ಬಿಗ್ ಬಾಸ್ ಮೂಲಕ ಪರಿಚಿತರಾದ ಚಂದನ್-ನಿವೇದಿತಾ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ