ದಾಂಪತ್ಯ ಜೀವನಕ್ಕೆ ಚಂದನ್ ಶೆಟ್ಟಿ – ನಿವೇದಿತಾ ಗೌಡ

ಮಂಗಳವಾರ, 25 ಫೆಬ್ರವರಿ 2020 (19:31 IST)
ಬಿಗ್ ಬಾಸ್ ಕನ್ನಡದ ವಿನ್ನರ್, ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಮದುವೆಯು ಮೈಸೂರಿನ ಖಾಸಗಿ ಕನ್ವೆನ್ಶನ್ ಹಾಲ್ ನಲ್ಲಿ ನಡೆಯಲಿದ್ದು, ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ.

ಫೆ. 25, 26 ರಂದು ಯುವ ಜೋಡಿಯ ಮದುವೆ ನಡೆಯಲಿದೆ. ಮದುವೆ ಅಂಗವಾಗಿ ಮೈಸೂರಿನ ದಟ್ಟಗಳ್ಳಿಯಲ್ಲಿರುವ ನಿವೇದಿತಾ ಗೌಡರ ಮನೆಯಲ್ಲಿ ಅರಿಶಿನ ಶಾಸ್ತ್ರ ನೆರವೇರಿತು.

ಮೈಸೂರಿನ ಕನ್ವೆನ್ಶನ್ ಹಾಲ್ ನಲ್ಲಿ ಮದುವೆ ನಡೆಯಲಿದ್ದು, ಸಿನಿಮಾ ರಂಗದ ಕಲಾವಿದರು, ಗಾಯಕರು ಹಾಗೂ ವಿವಿಧ ರಂಗಗಳ ಪ್ರಮುಖರು ಮದುವೆಗೆ ಸಾಕ್ಷಿಯಾಗಲಿದ್ದಾರೆ.

ಮೈಸೂರಿನಲ್ಲಿ ನಡೆದ ಯುವ ದಸರಾದ ಬಹಿರಂಗ ಸಮಾರಂಭದಲ್ಲಿ ನಿವೇದಿತಾ ಗೌಡಗೆ ಚಂದನ್ ಪ್ರಪೋಸ್ ಮಾಡಿ ಗಮನ ಸೆಳೆದಿದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ