ನಟಿ ಸಂಜನಾ ಜತೆಗಿನ ಮದುವೆ ವದಂತಿ ಬಗ್ಗೆ ಬಾಯ್ಬಿಟ್ಟ ಚಂದನ್ ಶೆಟ್ಟಿ, ಹೇಳಿದ್ದೇನು

Sampriya

ಮಂಗಳವಾರ, 18 ಮಾರ್ಚ್ 2025 (17:27 IST)
Photo Courtesy X
ಬೆಂಗಳೂರು: ನಟಿ ನಿವೇದಿತಾಗೆ ಡಿವೋರ್ಸ್‌ ನೀಡಿದ ಬೆನ್ನಲ್ಲೇ ಗಾಯಕ ಚಂದನ್ ಶೆಟ್ಟಿ ಅವರು ಕನ್ನಡದ ನಟಿಯೊಬ್ಬರ ಜತೆ ಮದುವೆಯಾಗಲಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಈ ವಿಚಾರವಾಗಿ ಸ್ವತಃ ಸಂಜನಾ ಹಾಗೂ ಚಂದನಾ ಶೆಟ್ಟಿ ಒಂದೇ ವೇದಿಕೆಯಲ್ಲಿ ಉತ್ತರ ನೀಡಿದ್ದಾರೆ.

ಚಂದನ್‌ ಶೆಟ್ಟಿ ಮತ್ತು ಸಂಜನಾ ಆನಂದ್ ಸೂತ್ರಧಾರಿ ಎಂಬ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಸಿನಿಮಾದ ಹಾಡೊಂದರಲ್ಲಿ ಇಬ್ಬರು ಜತೆಯಾಗಿ ಹೆಜ್ಜೆ ಹಾಕಿದ್ದು, ಇದನ್ನು ನೋಡಿ ಕೆಲ ಫ್ಯಾನ್ಸ್‌ ಗಳು ಪರ್ಫಕ್ಟ್‌ ಜೋಡಿಯೆಂದು ಕಮೆಂಟ್‌ ಮಾಡಿದ್ದರು. ಅದಲ್ಲದೆ ಈ ಜೋಡಿ ನಿಜಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತೆ ಎಂಬ ಸುದ್ದಿ ಹರಿದಾಡಿತ್ತು.

ಇದೀಗ ಈ ವಿಚಾರವಾಗಿ ಉತ್ತರಕೊಟ್ಟ ಚಂದನ್ ಹಾಗೂ ಸಂಜನಾ, ನಾವಿಬ್ಬರು ಒಳ್ಳೆಯ ಫ್ರೆಂಡ್ಸ್‌. ಸ್ನೇಹಿತನಿಗಿಂತಲೂ ಚಂದನ್ ನನಗೆ ಸಹೋದರನ ಹಾಗೇ.  ಈ ಮೂಲಕ ವದಂತಿಗೆ ಬ್ರೇಕ್ ನೀಡಿದರು.

ಚಂದನ್ ಮಾತನಾಡಿ, ನನಿಗೆ ಫ್ಯಾಮಿಲಿಯಿಂದ ಕರೆ ಮಾಡಿ ನೀನು ಸಂಜನಾ ಜತೆ ಮದುವೆಯಾಗುತ್ತಿದ್ದೀಯಾ ಅಂತಾ ಕೇಳಿದ್ರು, ಇಲ್ಲ ಅಂತಾ ಹೇಳಿದ್ರೆ ಸುಮ್ನಿರೂ ಅಂತಾ ನನ್ನಾ ಬಾಯಿಯನ್ನೇ ಮುಚ್ಚಿಸುತ್ತಿದ್ದರು. ಆದರೆ ನಮ್ಮಿಬ್ಬರ ಜತೆ ಆ ರೀತಿ ಏನಿಲ್ಲ ಎಂದು ಹೇಳಿದರು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ