ಭರಾಟೆ ಟೈಟಲ್ ಹಾಡಿಗೆ ಚಂದನ್ ಶೆಟ್ಟಿ ಧ್ವನಿ

ಬುಧವಾರ, 25 ಸೆಪ್ಟಂಬರ್ 2019 (08:46 IST)
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ರಾಪರ್ ಚಂದನ್ ಶೆಟ್ಟಿ ಹಾಡಿರುವ ರೋರಿಂಗ್ ಸ್ಟಾರ್ ಮುರಳಿ ಅಭಿನಯದ ಭರಾಟೆ ಸಿನಿಮಾದ ಟೈಟಲ್ ಹಾಡು ಇಂದು ಬಿಡುಗಡೆಯಾಗುತ್ತಿದೆ.


ಚಂದನ್ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿರುವ ಟೈಟಲ್ ಹಾಡಿಗೆ ಮೆಲೊಡಿ ಕಿಂಗ್ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಶ್ರೀ ಮುರಳಿ ಇಂಟ್ರಕ್ಷನ್ ಹಾಡು ಇದಾಗಲಿದ್ದು, ಭರ್ಜರಿ ಮಾಸ್ ಹಾಡಾಗಿರಲಿದೆ.

ಇಂದು ಬೆಳಿಗ್ಗೆ 11 ಗಂಟೆಗೆ ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ಹಾಡು ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಯೋ ಯೋ ಹಾಡು ಹಾಗೂ ಭರ ಭರ ಭರಾಟೆ ಸೂಪರ್ ಹಿಟ್ ಆಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ