ಯಶ್ ಗೆ ದಾದಾ ಸಾಹೇಬ್ ಪ್ರಶಸ್ತಿ: ವಿವಾದಕ್ಕೆ ಸ್ಪಷ್ಟನೆ ಕೊಟ್ಟ ಡಾ. ರಾಜ್ ಅಭಿಮಾನಿ ಬಳಗ
ಡಾ. ರಾಜ್ ಗೆ ಯಾರೂ ಸಾಟಿಯಿಲ್ಲ. ರಾಜ್ ಅವರಿಗೆ ಸರಿಸಮನಾದ ನಟ ಇನ್ನೊಬ್ಬರಿರಲಿಲ್ಲ, ಮತ್ತು ಇನ್ನು ಮುಂದೆ ಬರಲೂ ಸಾಧ್ಯವಿಲ್ಲ. ಹಾಗಿದ್ದರೂ ಕೆಲವರು ಇದನ್ನೇ ತಪ್ಪಾಗಿ ತಿಳಿದುಕೊಂಡು ರಾಜ್ ರನ್ನು ಸರಿಗಟ್ಟುವ ನಟ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅಣ್ಣಾವ್ರ ಸರಿಗಟ್ಟುವ ನಟ ಇನ್ನೂ ಬಂದಿಲ್ಲ ಎಂದು ರಾಜ್ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ.