ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ ಇಂದು

ಬುಧವಾರ, 6 ಜುಲೈ 2022 (09:20 IST)
ಹುಬ್ಬಳ್ಳಿ: ನಿನ್ನೆಯಷ್ಟೇ ಬರ್ಬರವಾಗಿ ಹತ್ಯೆಯಾಗಿದ್ದ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ ಇಂದು ನೆರವೇರಲಿದೆ.

ನಿನ್ನೆ ಮಧ‍್ಯಾಹ್ನ ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಇಬ್ಬರು ದುಷ್ಕರ್ಮಿಗಳು ಭಕ್ತರ ಸೋಗಿನಲ್ಲಿ ಬಂದು ಗುರೂಜಿಗೆ ಇರಿದು ಕೊಲೆ ಮಾಡಿದ್ದರು.

ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸಿದ್ದು, ಕೆಲವೇ ಗಂಟೆಗಳಲ್ಲಿ ಗುರೂಜಿ ಆಪ್ತರಾಗಿದ್ದ ಮಹಂತೇಶ್ ದಂಪತಿಯೇ ಕೊಲೆಯ ರೂವಾರಿಗಳು ಎಂದು ಪತ್ತೆ ಮಾಡಿದ್ದರು. ಇಂದು ಪೋಸ್ಟ್ ಮಾರ್ಟಂ ಬಳಿಕ ಗುರೂಜಿ ಮೃತದೇಹವನ್ನು ಹುಬ್ಬಳ್ಳಿಯ ಅವರ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಇದಕ್ಕಾಗಿ ಸಕಲ ಸಿದ್ಧತೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ