ಗರ್ಲ್ ಫ್ರೆಂಡ್ ಜೊತೆ ರತಿಕ್ರೀಡೆಯಾಡುವಾಗ ಯುವಕ ಸಾವು

ಬುಧವಾರ, 6 ಜುಲೈ 2022 (08:40 IST)
ನವದೆಹಲಿ: 28 ವರ್ಷದ ಯುವಕನೊಬ್ಬ ಗರ್ಲ್ ಫ್ರೆಂಡ್ ಜೊತೆ ರತಿಕ್ರೀಡೆಯಲ್ಲಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

28 ವರ್ಷದ ಯುವಕ ವೃತ್ತಿಯಲ್ಲಿ ಚಾಲಕನಾಗಿದ್ದಾನೆ. ಜೊತೆಗೆ ವೆಲ್ಡಿಂಗ್ ಕೆಲಸವನ್ನೂ ಮಾಡುತ್ತಿದ್ದ. ಈತನಿಗೆ 23 ವರ್ಷದ ನರ್ಸ್ ವೃತ್ತಿಯಲ್ಲಿರುವ ಮಹಿಳೆ ಜೊತೆ ದೈಹಿಕ ಸಂಬಂಧ ಹೊಂದಿದ್ದ. ಆದರೆ ಈ ಬಾರಿ ಲಾಡ್ಜ್ ನಲ್ಲಿ ಕಾಮಕೇಳಿಯಾಡುವಾಗ ಎಡವಟ್ಟಾಗಿದೆ. ತಕ್ಷಣವೇ ಮಹಿಳೆ ಲಾಡ್ಜ್ ಮ್ಯಾನೇಜರ್ ಗೆ ಮಾಹಿತಿ ನೀಡಿದ್ದಾಳೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆತ ಸಾವನ್ನಪ್ಪಿದ್ದ.

ಕಳೆದ ಕೆಲವು ದಿನಗಳ ಹಿಂದೆ ಈತನಿಗೆ ಜ್ವರ ಬಂದಿತ್ತು. ಈಗಷ್ಟೇ ಚೇತರಿಸಿಕೊಂಡಿದ್ದ ಎಂದು ಮೃತನ ಕುಟುಂಬಸ್ಥರು ತಿಳಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ