ಮೇ 16 ಕ್ಕೆ ಚಾರ್ಲಿ 777 ಟ್ರೈಲರ್ ಲಾಂಚ್

ಮಂಗಳವಾರ, 10 ಮೇ 2022 (18:13 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ನಾಯಕರಾಗಿರುವ ಚಾರ್ಲಿ 777 ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

ಮೇ 16 ಕ್ಕೆ ಚಾರ್ಲಿ 777 ಸಿನಿಮಾದ ಟ್ರೈಲರ್ ಲಾಂಚ್ ಆಗಲಿದೆ ಎಂದು ಪ್ರಕಟಣೆ ಹೊರಬಿದ್ದಿದೆ. ಮೇ 16 ರಂದು ಮಧ್ಯಾಹ್ನ 12.12 ಕ್ಕೆ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.

ಈ ಸಿನಿಮಾದಲ್ಲಿ ರಕ್ಷಿತ್ ಜೊತೆಗೆ ನಾಯಿಯೂ ಪ್ರಮುಖ ಪಾತ್ರವಹಿಸಿದೆ. ಧರ್ಮ ಮತ್ತು ಚಾರ್ಲಿಯ ಭಾವುಕ ಕತೆ ಈ ಸಿನಿಮಾದಲ್ಲಿದ್ದು, ಈಗಾಗಲೇ ಹಾಡುಗಳು ಸೂಪರ್ ಹಿಟ್ ಆಗಿವೆ. ಜೂನ್ 10 ರಂದು ಪಂಚ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ