ಇನ್ನೂ ರಿಲೀಸ್ ಆಗಿಲ್ಲ ಚಿರು ಸರ್ಜಾ ಕೊನೇ ಸಿನಿಮಾ! ಅಪ್ ಡೇಟ್ ನೀಡಿದ ಚಿತ್ರತಂಡ
ಚಿರು ಅಭಿಮಾನಿಗಳಿಗೆ ಇದು ವಿಶೇಷ ಸಿನಿಮಾವಾಗಿದೆ. ಚಿರು ಸರ್ಜಾ ಈ ಸಿನಿಮಾದ ಶೂಟಿಂಗ್ ಮುಗಿಸಿದ್ದರು. ಆದರೆ ಡಬ್ಬಿಂಗ್ ಮಾಡಲು ಸಾಧ‍್ಯವಾಗಿರಲಿಲ್ಲ.
ಹೀಗಾಗಿ ಅವರ ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್ ಮಾಡುತ್ತಿದ್ದಾರೆ. ಇನ್ನು, ಚಿತ್ರತಂಡ ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಬೇಗನೇ ಮುಗಿಸಿ ಜನರ ಮುಂದೆ ಬರುವ ವಿಶ್ವಾಸದಲ್ಲಿದೆ.