ಮಗನಿಗೆ ಪುನೀತ್ ಹೆಸರಿಟ್ಟ ಅಭಿಮಾನಿ
ಪುನೀತ್ ಮೇಲಿನ ಅಭಿಮಾನದಿಂದ ಎಷ್ಟೋ ಅಭಿಮಾನಿಗಳು ಪ್ರತಿಮೆ ಸ್ಥಾಪಿಸುವುದು, ರಸ್ತೆಗೆ ನಾಮಕರಣ ಮಾಡುವುದು, ರಕ್ತದಾನ, ನೇತ್ರದಾನಕ್ಕೆ ಮುಂದಾಗಿರುವುದು ಇದೆ. ಆದರೆ ಇಲ್ಲೊಬ್ಬರು ಅಭಿಮಾನಿ ತಮ್ಮ ನವಜಾತ ಮಗುವಿಗೆ ಪುನೀತ್ ಹೆಸರನ್ನೇ ನಾಮಕರಣ ಮಾಡಿದ್ದಾರೆ.
ಸಿದ್ಧು ಮತ್ತು ಕಾವೇರಿ ಎಂಬ ಪುನೀತ್ ಅಪ್ಪಟ ಅಭಿಮಾನಿಗಳಾದ ದಂಪತಿ ತಮ್ಮ ಗಂಡು ಮಗುವಿಗೆ ಪುನೀತ್ ಎಂದು ನಾಮಕರಣ ಮಾಡಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸಿದ್ದಾರೆ.