ಸಾಹಸಸಿಂಹ ಡಾ. ವಿಷ್ಣುವರ್ಧನ್ ಗೂ ಕರ್ನಾಟಕ ರತ್ನ: ಭರವಸೆ ನೀಡಿದ ಸಿಎಂ

ಸೋಮವಾರ, 30 ಜನವರಿ 2023 (09:30 IST)
Photo Courtesy: Twitter
ಬೆಂಗಳೂರು: ಸಹಸ್ರಾರು ಅಭಿಮಾನಿಗಳ ಎದೆಯಲ್ಲಿ ಅಜರಾಮರಾಗಿರುವ ಸಾಹಸಸಿಂಹ ಡಾ. ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ನೀಡಬೇಕು ಎಂಬ ಅಭಿಮಾನಿಗಳ ಒತ್ತಾಸೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಸಿಎಂ ನಿನ್ನೆ ಮೈಸೂರಿನ ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ ಮಾಡಿದ್ದಾರೆ. ಇದು ಅಭಿಮಾನಿಗಳ ಬಹಳ ವರ್ಷಗಳ ಬೇಡಿಕೆಯಾಗಿತ್ತು. ಕೊನೆಗೂ ಅದೀಗ ಈಡೇರಿದೆ. ಅಭಿಮಾನಿಗಳ ಪ್ರೀತಿಯ ದಾದನ ಭವ್ಯವಾದ ಸ್ಮಾರಕ ತಲೆಎತ್ತಿ ನಿಂತಿದೆ.

ಬೇರೆ ನಟರಿಗೆ ಕೊಡುವ ಗೌರವವನ್ನು ವಿಷ್ಣುವರ್ಧನ್ ಅವರಿಗೆ ಯಾಕೆ ಕೊಡುತ್ತಿಲ್ಲ ಎಂದು ಕಿಡಿ ಕಾರಿದ್ದ ವಿಷ್ಣು ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ್, ಅವರಿಗೂ ಕರ್ನಾಟಕ ರತ್ನ ನೀಡಲು ಒತ್ತಾಯಿಸಿದ್ದರು. ಇದೀಗ ಅಭಿಮಾನಿಗಳ ಒತ್ತಾಸೆಗೆ ಸ್ಪಂದಿಸಿರುವ ಸಿಎಂ, ವಿಷ್ಣುವರ್ಧನ್ ಗೂ ಕರ್ನಾಟಕ ರತ್ನ ನೀಡುವ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ