ಅತೀ ಹೆಚ್ಚು ಐಸಿಸಿ ಪ್ರಶಸ್ತಿ ಪಡೆದ ಕ್ರಿಕೆಟಿಗರು

ಸೋಮವಾರ, 30 ಜನವರಿ 2023 (08:30 IST)
Photo Courtesy: Twitter
ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಕ್ರಿಕೆಟಿಗರ ಸಾಧನೆ ಗಮನಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ.

ಇತ್ತೀಚೆಗೆ ತಿಂಗಳಿಗೊಮ್ಮೆ ಆಯಾ ತಿಂಗಳು ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರನ್ನು ಪರಿಗಣಿಸಿ ಮಾಸಿಕ ಪ್ರಶಸ್ತಿಯನ್ನೂ ನೀಡುತ್ತಿದೆ. ಈ ರೀತಿ ಐಸಿಸಿಯ ವಿವಿಧ ವಿಭಾಗಗಳಲ್ಲಿ ಅತೀ ಹೆಚ್ಚು ಬಾರಿ ಪ್ರಶಸ್ತಿ ಪಡೆದ ಕ್ರಿಕೆಟಿಗರು ಯಾರು ಎಂದು ನೋಡೋಣ.

ಐಸಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ಅತೀ ಹೆಚ್ಚು ಬಾರಿ ಗೆದ್ದ ಗೌರವ ಭಾರತೀಯ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಮತ್ತು ವಿರಾಟ್ ಕೊಹ್ಲಿಗೆ ಸಲ್ಲುತ್ತದೆ. ಇಬ್ಬರೂ 20 ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಎರಡನೇ ಸ್ಥಾನ ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಗೆ. ಅವರು 16 ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಉಳಿದಂತೆ ಕ್ರಿಸ್ ಗೇಲ್ 12 ಬಾರಿ, ಡೇವಿಡ್ ವಾರ್ನರ್ 12 ಬಾರಿ, ಸನತ್ ಜಯಸೂರ್ಯ 13 ಬಾರಿ, ಜ್ಯಾಕ್ ಕ್ಯಾಲಿಸ್ 15 ಬಾರಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ