ತಿಣುಕಾಡಿ ಗೆದ್ದ ಟೀಂ ಇಂಡಿಯಾ

ಸೋಮವಾರ, 30 ಜನವರಿ 2023 (08:40 IST)
ಲಕ್ನೋ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟಿ20 ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್ ಗಳಿಂದ ಗೆದ್ದುಕೊಂಡಿದೆ.

ತೀವ್ರ ತಿರುವು ಪಡೆಯುತ್ತಿದ್ದ ಪಿಚ್ ನಲ್ಲಿ ಸ್ಪಿನ್ನರ್ ಗಳ ದಾಳಿಗೆ ಸಿಲುಕಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸುಲಭ ಮೊತ್ತವನ್ನು ಬೆನ್ನತ್ತಲು ಟೀಂ ಇಂಡಿಯಾ ತಿಣುಕಾಡಿತು. ಶುಬ್ನಂ ಗಿಲ್ 11, ಇಶಾನ್ ಕಿಶನ್ 19, ರಾಹುಲ್ ತ್ರಿಪಾಠಿ 13, ವಾಷಿಂಗ್ಟನ್ ಸುಂದರ್ 10 ರನ್ ಗಳಿಸಿ ಔಟಾದರು.

ಆದರೆ ಸೂರ್ಯಕುಮಾರ್ ಯಾದವ್ ಜವಾಬ್ಧಾರಿಯುತ ಆಟವಾಡಿ ಅಜೇಯ 26 ರನ್ ಗಳಿಸಿದರು. ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 15 ರನ್ ಗಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ 19.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿ ಸರಣಿ ಸಮಬಲಗೊಳಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ