ಸೀರಿಯಲ್ ಪ್ರಿಯರಿಗೆ ಗುಡ್‌ನ್ಯೂಸ್, ಇನ್ಮುಂದೆ ಲಕ್ಷ್ಮಿ ಬಾರಮ್ಮ, ಭಾಗ್ಯಲಕ್ಷ್ಮಿ ವಾರದ 7 ದಿನ ಪ್ರಸಾರ

Sampriya

ಮಂಗಳವಾರ, 12 ನವೆಂಬರ್ 2024 (16:11 IST)
Photo Courtesy X
ಸೀರಿಯಲ್ ಪ್ರಿಯರಿಗೆ ಕಲರ್ಸ್ ಕನ್ನಡ ವಾಹಿನಿ ಗುಡ್‌ನ್ಯೂಸ್‌ನೀಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತಿದ್ದ ಸೀರಿಯಲ್‌ಗಳು ಇನ್ಮುಂದೆ ವಾರದ ಏಳೂ ದಿನ ಕೂಡಾ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ.

ಸೋಮವಾರದಿಂದ ಶುಕ್ರವಾರದವರೆಗೂ ಸೀರಿಯಲ್‌ಗಳನ್ನ ಬಿಟ್ಟೂ ಬಿಡದೆ ನೋಡುವ ಕಿರುತೆರೆ ಪ್ರಿಯರಿಗೆ ಶುಕ್ರವಾರ ಬಂತೆಂದ್ರೆ ಬೇಜರೂ. ಆದರೆ ಇದೀಗ ವಾರದ ಏಳು ದಿನವೂ ತಮ್ಮ ನೆಚ್ಚಿನ ಸೀರಿಯಲ್ ನೋಡಿ ಖುಷಿಪಡಬಹುದು.

ಸಂಜೆ 6ರಿಂದ ಪ್ರಸಾರವಾಗುವ ಕರಿಮಣಿ ಸೀರಿಯಲ್‌ನಿಂದ ಸಂಜೆ 8.30ರವೆರೆಗೆ ಪ್ರಸಾರವಾಗುವ ಶ್ರೀಗೌರಿ ಸೀರಿಯಲ್‌ಗಳು ಇನ್ಮುಂದೆ ವಾರದ 7ದಿನ ಪ್ರಸಾರವಾಗಲಿದೆ. ಇನ್ನೂ ರಾಮಚಾರಿ ಸೀರಿಯಲ್‌ಗಳು ಬಿಟ್ಟು ಬೇರೆಲ್ಲ ಸೀರಿಯಲ್‌ಗಳು ವಾರದ 7ದಿನವೂ ಪ್ರಸಾರವಾಗಲಿದೆ.

ಪ್ರತಿದಿನ 9.30ಗೆ ಶುರುವಾಗುವ ಬಿಗ್‌ಬಾಸ್‌ ಶನಿವಾರ ಮತ್ತು ಭಾನುವಾರ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಸಂಚಿಕೆಗಳು  ರಾತ್ರಿ 9ಗಂಟೆಗೆ ಶುರುವಾಗುತ್ತದೆ. ಹೀಗಾಗಿ 'ರಾಮಾಚಾರಿ' ಸೀರಿಯಲ್‌ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುವುದಿಲ್ಲ. 'ರಾಮಾಚಾರಿ' ಬಿಟ್ಟು ಉಳಿದೆಲ್ಲಾ ಧಾರಾವಾಹಿಗಳನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ನೀವು ಪ್ರತಿದಿನ ವೀಕ್ಷಿಸಬಹುದು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ