ನಟಿ ರಿಯಾ ಚಕ್ರವರ್ತಿ ಬಿಡುಗಡೆ ಕಾಂಗ್ರೆಸ್ ಆಗ್ರಹ

ಭಾನುವಾರ, 4 ಅಕ್ಟೋಬರ್ 2020 (21:48 IST)
ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಬೆಂಬಲಕ್ಕೆ ಕಾಂಗ್ರೆಸ್ ನಿಂತಂತಿದೆ.

ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕುರಿತು ಏಮ್ಸ್ ವೈದ್ಯರ ತಂಡ ವರದಿ ನೀಡಿದೆ.

ಸುಶಾಂತ್ ಸಿಂಗ್ ಕೊಲೆಯಾಗಿಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ರಾಜಕೀಯ ಪಿತೂರಿಯ ಬಲಿಪಶು ಮಾಡಲಾಗಿರುವ ನಟಿ ರಿಯಾ ಚಕ್ರವರ್ತಿಯನ್ನು ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್ ಮುಖಂಡ, ಸಂಸದ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ನಟ ಸುಶಾಂತ್ ಸಾವು ನೋವು ನಮಗೂ ಇದೆ. ಆದರೆ ರಿಯಾ ವಿರುದ್ಧ ದೂಷಣೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ