ಬಾಲಿವುಡ್ ನಟಿಗೆ ಆ ಥರ ಮಾಡೇ ಇಲ್ಲ ಎಂದ ನಿರ್ಮಾಪಕ

ಶುಕ್ರವಾರ, 2 ಅಕ್ಟೋಬರ್ 2020 (12:30 IST)
ಬಾಲಿವುಡ್ ನಟಿ ತಮ್ಮ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಎಂದಿ ನಿರ್ಮಾಪಕ ಹೇಳಿಕೆ ನೀಡಿದ್ದಾರೆ.

ನಿರ್ಮಾಪಕ ಅನುರಾಗ್ ಕಶ್ಯಪ್ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ.

ನಟಿ ಪಾಯಲ್ ಘೋಷ್ ಮಾಡಿರುವ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಕಶ್ಯಪ್ ನಿರಾಕರಿಸಿದ್ದಾರೆ.

ಅಲ್ಲದೇ ಬಾಲಿವುಡ್ ನಟಿ ಪಾಯಪ್ ಘೋಷ್ ಅವರು ನ್ಯಾಯ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ನಿರ್ಮಾಪಕರ ಪರ ವಕೀಲ ಪ್ರಿಯಾಂಕಾ ಖಿಮಾನಿ ಹಾಗೂ ನಿರ್ಮಾಪಕರ ಪತ್ನಿ ಶ್ರೀಮತಿ ಘೋಷ್ ಅವರು ನಟಿ ದಾಖಲು ಮಾಡಿರುವ ದೂರು ಸಂಪೂರ್ಣ ಸುಳ್ಳಿನಿಂದ ಕೂಡಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ