ಬಾಲಿವುಡ್ ನಟಿಯ ಪಾಲಿಗೆ ಇವರೇ ಕೂಲ್, ಸ್ಟ್ರಾಂಗ್
ಬಾಲಿವುಡ್ ನಟಿಯೊಬ್ಬರ ಪಾಲಿಗೆ ಹಿರಿಯ ನಟಿಯೇ ಅತ್ಯಂತ ಬಲಿಷ್ಠ ವ್ಯಕ್ತಿಯಾಗಿದ್ದಾರಂತೆ.
ಹಿರಿಯ ಬಾಲಿವುಡ್ ನಟಿ ಶರ್ಮಿಳಾ ಟ್ಯಾಗೋರ್ ಅವರು ತಮ್ಮ 76 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿಯ ಎಲ್ಲಾ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೆಲವು ಅದ್ಭುತ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ನಡುವೆ, ಸೊಸೆ ಮತ್ತು ಸೂಪರ್ ಸ್ಟಾರ್ ಕರೀನಾ ಕಪೂರ್ ಖಾನ್ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೃದಯಸ್ಪರ್ಶಿ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ. ತನ್ನ ಥ್ರೋಬ್ಯಾಕ್ ಚಿತ್ರವನ್ನು ಪೋಸ್ಟ್ ಮಾಡಿದ ಬೆಬೊ, "ನನಗೆ ತಿಳಿದಿರುವ ಅತ್ಯಂತ ತಂಪಾದ ಮತ್ತು ಬಲಿಷ್ಠ ಮಹಿಳೆಯರಲ್ಲಿ ಒಬ್ಬರಿಗೆ ... ಜನ್ಮದಿನದ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.