ಮಹಾಭಾರತ ಧಾರವಾಹಿಯಲ್ಲಿ ಭೀಷ್ಮನ ಹಿಂದೆ ಕೂಲರ್! ಟ್ವಿಟರಿಗರ ಟ್ರೋಲ್

ಶುಕ್ರವಾರ, 24 ಏಪ್ರಿಲ್ 2020 (10:33 IST)
ನವದೆಹಲಿ: ಡಿಡಿ ಭಾರತಿಯಲ್ಲಿ ಪ್ರತಿನಿತ್ಯ ಮರುಪ್ರಸಾರವಾಗುತ್ತಿರುವ ‘ಮಹಾಭಾರತ’ ಧಾರವಾಹಿಯಲ್ಲಿ ಭೀಷ್ಮ ಪಾತ್ರಧಾರಿಯ ಹಿಂದುಗಡೆ ಕೂಲರ್ ಇರುವುದನ್ನು ಪತ್ತೆ ಮಾಡಿರುವ ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ.


ದ್ವಾಪರ ಯುಗದ ಕತೆಯಲ್ಲಿ ಕೂಲರ್ ಹೇಗೆ ಬಂತು ಎಂದು ಹಲವರು ಟ್ರೋಲ್ ಮಾಡಿದ್ದಾರೆ. ಬಹುಶಃ ಇದು ಎಡಿಟಿಂಗ್ ಸಮಯದಲ್ಲಿ ಕಾಣದೇ ಎಡವಟ್ಟಾಗಿರಬಹುದು. ಆದರೆ ಈಗಿನ ಕಾಲದ ಪ್ರೇಕ್ಷಕರ ಕಣ್ಣು ತುಂಬಾ ಸೂಕ್ಷ್ಮ.

ಹೀಗಾಗಿಯೇ ಅಂದು ಮಾಡಿದ ಎಡವಟ್ಟು ಬೆಳಕಿಗೆ ಬಂದಿದೆ. ಭಲೇ ಭೀಷ್ಮ ಪಿತಾಮಹ ಭಾರೀ ಮುಂದಾಲೋಚನೆ ಹೊಂದಿದ್ದರು. ಆ ಯುಗದಲ್ಲೇ ಕೂಲರ್ ಹೊಂದಿದ್ದರು ಎಂದು ಹಲವರು ತಮಾಷೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ