ತಮಿಳು ಹಾಸ್ಯ ನಟ ಸೆಂಥಿಲ್ ಗೆ ಕೊರೊನಾ

ಬುಧವಾರ, 14 ಏಪ್ರಿಲ್ 2021 (11:13 IST)
ಚೆನ್ನೈ : ತಮಿಳಿನಲ್ಲಿ 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹಿರಿಯ ತಮಿಳು ಹಾಸ್ಯ ನಟ ಸೆಂಥಿಲ್ ಅವರು ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇತ್ತೀಚೆಗೆ ನಟ ಸೆಂಥಿಲ್ ಅವರು ತಮಿಳುನಾಡು ಚುನಾವಣೆಯ ಸದರ್ಭದಲ್ಲಿ ತೀವ್ರ ಪ್ರಚಾರದಲ್ಲಿ ತೊಡಗಿದ್ದರು.  ಮತ್ತು ರಾಜ್ಯದ ಹಲವೆಡೆ ಸಂಚರಿಸಿದ್ದರು. ಇದರಿಂದ ಅವರಿಗೆ ಕೊರೊನಾ ಲಕ್ಷಣಗಳು ಕಂಡುಬಂದಿದೆ.  ಹಾಗಾಗಿ ಕೊರೊನಾ ಟೆಸ್ಟ್ ಗೆ ಒಳಗಾದ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ.

ಈ ಹಿನ್ನಲೆಯಲ್ಲಿ ಅವರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಸುಧಾರಿಸಿದ್ದು, ಇನ್ನೆರಡು ಮೂರು ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ