ಹುಡುಗಿಯ ಮೇಲೆ ಐವರು ಯುವಕರಿಂದ ಲೈಂಗಿಕ ಕಿರುಕುಳ

ಬುಧವಾರ, 14 ಏಪ್ರಿಲ್ 2021 (10:25 IST)
ಚೆನ್ನೈ : 15 ವರ್ಷದ ಹುಡುಗಿಯ ಮೇಲೆ ಐವರು ಯುವಕರು ಸೇರಿಕೊಂಡು ಆರು ತಿಂಗಳಗಳ  ಕಾಲ ಲೈಂಗಿಕ ಕಿರುಕುಳ ನೀಡಿದ ಘಟನೆ ಕಡಲೂರಿನಲ್ಲಿ ನಡೆದಿದೆ.

ಹುಡುಗಿಯ ಪೋಷಕರು ಕೆಲಸಕ್ಕೆ ಹೋಗುತ್ತಿದ್ದ ಹಿನ್ನಲೆಯಲ್ಲಿ ಚಿಕ್ಕಪ್ಪನ ಮನೆಯಲ್ಲಿದ್ದ ಹುಡುಗಿಗೆ ಈ ಐವರು ಯುವಕರು ಲೈಂಗಿಕ ಕಿರುಕುಳ ನೀಡುತ್ತಿದ್ದರು. ಸಂತ್ರಸ್ತೆಯ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಚಿಕ್ಕಪ್ಪ ವಿಚಾರಿಸಿದಾಗ ಆಕೆ ಘಟನೆಯ ಬಗ್ಗೆ ವಿವರಿಸಿದ್ದಾಳೆ.

ಈ ಬಗ್ಗೆ ಚಿಕ್ಕಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ಪೊಲೀಸರು ಐವರಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ, ಉಳಿದಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ