ರಕ್ಷಿತ್ ಶೆಟ್ಟಿ ಚಾರ್ಲಿ 777 ಸಿನಿಮಾ ತಂಡಕ್ಕೆ ಹೊಸ ಸೇರ್ಪಡೆ ಈ ನಟ

ಗುರುವಾರ, 2 ಜುಲೈ 2020 (09:16 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯಕ್ಕೆ ಚಾರ್ಲಿ 777 ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ರಕ್ಷಿತ್ ಬರ್ತ್ ಡೇಗೆ ಈ ಸಿನಿಮಾದ ಟೀಸರ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಚಿತ್ರದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


ನಾಯಿ ಜತೆಗೆ ರಕ್ಷಿತ್ ಕಾಂಬಿನೇಷನ್ ಬಗ್ಗೆ ಜನರಲ್ಲಿ ಈಗಾಗಲೇ ಕುತೂಹಲ ಮೂಡಿದೆ. ಪಕ್ಕಾ ಮನರಂಜನೆ ಇರುವ ಈ ಸಿನಿಮಾಗೆ ಈಗ ಜನಪ್ರಿಯ ನಟ ಡ್ಯಾನಿಶ್ ಸೇಠ್ ಸೇರ್ಪಡೆಯಾಗಿದ್ದಾರೆ.

ಡ್ಯಾನಿಶ್ ಬರ್ತ್ ಡೇ ದಿನವಾಗಿದ್ದ ನಿನ್ನೆ ರಕ್ಷಿತ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿರುವುದು ಪಕ್ಕಾ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ