ಅನ್ಯ ರಂಗಸ್ವಾಮಿ ಎಂಬವರ ಜತೆ ಸದ್ಯದಲ್ಲೇ ಮದುವೆಯಾಗುತ್ತಿರುವ ಸುದ್ದಿಯನ್ನು ದ್ಯಾನಿಶ್ ನೀಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಅನ್ಯ ಜತೆಗಿನ ಫೋಟೋವನ್ನು ಪ್ರಕಟಿಸಿರುವ ದ್ಯಾನಿಶ್ ಎಲ್ಲರಿಗೂ ನಮಸ್ಕಾರ. ಈಕೆ ನನಗೆ ಜೊತೆಯಾಗಲು ಸಮ್ಮತಿಸಿದ್ದಾಳೆ. ನನ್ನ ಜೀವನದ ಭಾಗವಾಗಲು ಸಮ್ಮತಿಸಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಆದರೆ ತಮ್ಮ ಹುಡುಗಿಯ ಹಿನ್ನಲೆಯನ್ನು ಬಹಿರಂಗಪಡಿಸಿಲ್ಲ.