ಗರ್ಭಿಣಿ ಪತ್ನಿಯನ್ನು ಕರೆದುಕೊಂಡು ಥೈಲ್ಯಾಂಡ್ ಟೂರ್ ಮಾಡ್ತಿದ್ದಾರೆ ನಟ ಡಾರ್ಲಿಂಗ್ ಕೃಷ್ಣ
ಮಿಲನಾ ಮತ್ತು ಕೃಷ್ಣ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್ ನಲ್ಲಿ ಮಿಲನಾ ಮಗುವಿಗೆ ಜನ್ಮ ನೀಡಲಿದ್ದಾರೆ. ಸದ್ಯಕ್ಕೆ ಅವರು ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಪತ್ನಿ ಜೊತೆಗಿರಲು ಡಾರ್ಲಿಂಗ್ ಕೃಷ್ಣ ಕೂಡಾ ಶೂಟಿಂಗ್ ನಿಂದ ಬಿಡುವು ಪಡೆದುಕೊಂಡಿದ್ದಾರೆ.
ಈ ಬಿಡುವಿನಲ್ಲಿ ದಂಪತಿ ಥೈಲ್ಯಾಂಡ್ ಪ್ರವಾಸ ಮಾಡಿದ್ದಾರೆ. ಇಲ್ಲಿನ ಸುಂದರ ಪರಿಸರದಲ್ಲಿ ಮಿಲನಾ ಜೊತೆಗಿರುವ ಫೋಟೋಗಳನ್ನು ಡಾರ್ಲಿಂಗ್ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಿಲನಾ ಉಬ್ಬು ಹೊಟ್ಟೆ ನೋಡಿ ನೆಟ್ಟಿಗರು ನಾನಾ ಕಾಮೆಂಟ್ ಮಾಡಿದ್ದಾರೆ.
ಕೆಲವರು ಮಿಲನಾ ಉಬ್ಬು ಹೊಟ್ಟೆ ನೋಡಿ ಖಂಡಿತಾ ನಿಮಗೆ ಗಂಡು ಮಗುವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಮತ್ತೆ ಕೆಲವರು ಬೇಬಿ ಬಂಪ್ ನಲ್ಲಿ ಕ್ಯೂಟ್ ಆಗಿ ಕಾಣಿಸ್ತಿದ್ದೀರಿ. ಇದೇ ರೀತಿ ಖುಷಿಯಾಗಿರಿ ಎಂದು ಹಾರೈಸಿದ್ದಾರೆ. ವಾರದ ಹಿಂದಷ್ಟೇ ಮಿಲನಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.