ಚಾಲೆಂಜಿಂಗ್ ಸ್ಟಾರ್ ದರ್ಶನ್ ಡೆವಿಲ್ ಸಿನಿಮಾ ಅಪ್ ಡೇಟ್ ಗೆ ಫ್ಯಾನ್ಸ್ ಖುಷಿ

Krishnaveni K

ಮಂಗಳವಾರ, 7 ಮೇ 2024 (21:10 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಡೆವಿಲ್ ಸಿನಿಮಾ ತಂಡದಿಂದ ಅಭಿಮಾನಿಗಳಿಗೆ ಭರ್ಜರಿ ಅಪ್ ಡೇಟ್ ಒಂದು ಸಿಕ್ಕಿದೆ.

ಮೇ 10 ರಂದು ಚಿತ್ರದ ಮೇಕಿಂಗ್ ವಿಡಿಯೋವೊಂದನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.  ಈ ಸುದ್ದಿ ಕೇಳುತ್ತಲೇ ಅಭಿಮಾನಿಗಳು ಖುಷಿಯಾಗಿದ್ದಾರೆ. ಇತ್ತೀಚೆಗಷ್ಟೇ ಕಾಟೇರದಂತಹ ಸಕ್ಸಸ್ ಸಿನಿಮಾ ಕೊಟ್ಟ ದರ್ಶನ್ ಕಡೆಯಿಂದ ಈಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.

ದರ್ಶನ್ ಕಾಟೇರ ಸಿನಿಮಾ ಬಳಿಕ ಮಾಡುತ್ತಿರುವ ಮತ್ತೊಂದು ಮಾಸ್ ಥ್ರಿಲ್ಲರ್ ಸಿನಿಮಾವಿದು. ಈ ಸಿನಿಮಾವನ್ನು ಮಿಲನ ಖ್ಯಾತಿಯ ನಿರ್ದೇಶಕ ಪ್ರಕಾಶ್ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ವಿಶೇಷ ಸೆಟ್ ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು.

ಈ ನಡುವೆ ಚಿತ್ರೀಕರಣದ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿದ್ದ ದರ್ಶನ್ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಇದೀಗ ಅವರ ಕೈಗೆ ಹಾಕಲಾಗಿದ್ದ ಬ್ಯಾಂಡೇಜ್ ತೆಗೆಯಲಾಗಿದ್ದು ಮತ್ತೆ ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಮೇಕಿಂಗ್ ವಿಡಿಯೋ ಬಿಡುಗಡೆಯ ಸಿಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ