BigBoss Season 12: ಕಲರ್ಸ್ ಕನ್ನಡ ಸೀರಿಯಲ್ ನೋಡುಗರಿಗೆ ಇಲ್ಲಿದೆ ಬಿಗ್‌ಚಾನ್ಸ್‌

Sampriya

ಶನಿವಾರ, 6 ಸೆಪ್ಟಂಬರ್ 2025 (18:33 IST)
Photo Credit X
ಕನ್ನಡ ಕಿರುತೆರೆ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12ನೇ ಆವೃತ್ತಿಯು ಇದೇ 28ರಂದು ಗ್ರ್ಯಾಂಡ್ ಆಗಿ ಓಪನ್ ಆಗಲಿದೆ. ಈ ಸಂಬಂಧ ಕಲರ್ಸ್‌ ಕನ್ನಡ ಒಂದೊಂದೆ ಪ್ರೋವೋವನ್ನು ರಿಲೀಸ್ ಮಾಡುತ್ತಿದೆ. 

ಇದೀಗ ಪ್ರೋಮೋ ನೋಡಿದ ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.

ಇದೇ ಮೊಟ್ಟ ಮೊದಲ ಬಾರಿಗೆ ಬಿಗ್‌ಬಾಸ್‌ ತಂಡ ಹೊಸ ಸಾಹಸಕ್ಕೆ ಮುಂದಾಗಿದೆ. ಬಿಗ್‌ಬಾಸ್‌ ಮನೆಗೆ ಅತಿಥಿಯಾಗಿ ಎಂಟ್ರಿ ಕೊಡಲು ಅದ್ಭುತ ಅವಕಾಶ ಕಲ್ಪಿಸಲಾಗಿದೆ. ಕಲರ್ಸ್ ಕನ್ನಡ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹೊಸ ಪ್ರೋಮೊವೊಂದನ್ನು
ಹಂಚಿಕೊಂಡಿದೆ. ಅದರಲ್ಲಿ ‘ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ, ಬಿಗ್‌ಬಾಸ್‌ ಮನೆಗೆ ಸ್ವಾಗತ’ ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

ಸೋಮವಾರದಿಂದ ಸಂಜೆ 6ರಿಂದ 10.30ರ ವರೆಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಸೀರಿಯಲ್ ನೋಡಿ, ಧಾರವಾಹಿ ಕೊನೆಯಲ್ಲಿ ಕೇಳುವ ಪ್ರಶ್ನೆಗೆ ಉತ್ತರಿಸಿ, ಅದರ ಲಕ್ಕಿ ವಿಜೇತರಿಗೆ  ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಹೋಗುವ ಅವಕಾಶವನ್ನು ನೀಡಲಾಗಿದೆ. 

ಸೆ. 28ರಿಂದ ಬಿಗ್‌ಬಾಸ್‌ ಶುರುವಾಗಲಿದ್ದು, ಈ ಬಾರಿಯ ಆವೃತ್ತಿಗೆ ಯಾರೆಲ್ಲಾ ಬರಲಿದ್ದಾರೆ ಅಂತ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ