ತನ್ನ ಹೆಸರಿನಲ್ಲಿ ಕೋಟ್ಯಂತ ರೂಪಾಯಿ ವಂಚನೆಗೆ ಯತ್ನ ನಡೆದಿರುವ ಬಗ್ಎಗ ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ಹಾಜರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ನನಗೆ ಹೆಚ್ಚು ಏನೂ ಮಾಹಿತಿ ಇಲ್ಲ. ತನಿಖೆ ನಂತರ ಎಲ್ಲವನ್ನೂ ಹೇಳ್ತೀನಿ ಎಂದರು.
ಆಯಮ್ಮ (ನಕಲಿ ಬ್ಯಾಂಕ್ ಮ್ಯಾನೇಜರ್) ಬಾಯಿ ಬಿಟ್ಟರೆ ಎಲ್ಲವೂ ಗೊತ್ತಾಗುತ್ತದೆ. ಪೊಲೀಸರು ತನಿಖೆಯಲ್ಲಿ ಬಾಯಿ ಬಿಡಿಸ್ತಾರೆ. ತನಿಖೆ ವೇಳೆ ಮಾಹಿತಿ ಏನು ಬರುತ್ತೆ ಅನ್ನೋದು ಗೊತ್ತಿಲ್ಲ. ಇವತ್ತು ಪೊಲೀಸ್ ಬನ್ನಿ ಅಂತಾ ಕರೆದಿದ್ದರು ಬಂದಿದ್ದೇನೆ. ನಾನು ಕಥೆ ಹೇಳಿದ್ರೆ ಚೆನ್ನಾಗಿರಲ್ಲ. ಅವರು ಏನು ಹೇಳುತ್ತಾರೆ ಎಂಬುದರ ಮೇಲೆ ಎಲ್ಲವೂ ಗೊತ್ತಗುತ್ತೆ. ಸ್ನೇಹಿತರಿಂದಲೇ ಮೊಸ ಆಗಿದೆ ಅಂತಾ ಗೊತ್ತಾದರೇ. ಯಾರದರೂ ನಾನು ಬಿಡಲ್ಲ. ಅದು ಮಾತ್ರ ಗ್ಯಾರಂಟಿ ಎಂದು ದರ್ಶನ್ ಸ್ಪಷ್ಟಪಡಿಸಿದರು.
ಇದೇ ವೇಳೆ ಮಾತನಡಿದ ನಿರ್ಮಾಪಕ ಉಮಾಪತಿ, ಈ ಘಟನೆ ಬಗ್ಗೆ ನಮಗೆ ಒಂದು ತಿಂಗಳ ಹಿಂದೆಯೇ ಮಾಹಿತಿ ಬಂದಿತ್ತು. ಬೆಂಗಳೂರಿನ ಜಯನಗರ ಠಾಣೆಗೆ ದೂರು ನೀಡಿದ್ದೆವು. ಆದರೆ ಮೈಸೂರಿನಲ್ಲಿ ದೂರು ಕೊಟ್ಟರೆ ಒಳ್ಳೆಯದು ಎಂದು ಹೇಳಿದ್ದರಿಂದ ಇಲ್ಲಿ ದೂರು ನೀಡಿದ್ದೇವೆ. ತನಿಖೆ ಪೂರ್ಣಗೊಂಡ ನಂತರ ಎಲ್ಲವನ್ನೂ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.