ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಆಗಲಿದ್ದಾರೆ.. ಹೀಗಾಗಿ ಸರ್ಕಾರ ಆನಲೈನ್ ಕ್ಲಾಸ್ ನಡೆಸುತ್ತಿದೆ. ಇದರಿಂದ ಖಾನಾಪುರ ತಾಲೂಕಿನ ಕಾಡಂಚಿನ ವಿದ್ಯಾರ್ಥಿಗಳು ನೆಟ್ವರ್ಕ್ ಗಾಗಿ ಪರದಾಡುವಂತಾಗಿದೆ. ಆನಲೈನ್ ಕ್ಲಾಸ್ ಗಾಗಿ ವಿದ್ಯಾರ್ಥಿಗಳು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಗಡಿ ಪ್ರದೇಶದ ಬೆಟ್ಟದಲ್ಲಿ ಮಳೆಯನ್ನೇ ಲೆಕ್ಕಿಸದೇ ಛತ್ರಿ ಹಿಡಿದು ಕುಳಿತುಕೊಳ್ಳುವಂತಾಗಿದೆ. ವಿದ್ಯಾರ್ಥಿಗಳ ಸಂಕಷ್ಟ ಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಶಾಸಕಿ ಡಾ.ಅಂಜಲಿ ನಿಂಬಾಳಕರ ಟ್ವಿಟರನಲ್ಲಿ ಟ್ವಿಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಹೌದು...ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತಣ್ಣಗಾಗಿದೇ..ಮೂರನೇ ಅಲೆ ಆತಂಕ ಸೃಷ್ಟಿಯಾಗಿದೆ. ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಅಂತಾ ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಸರ್ಕಾರ ಆನಲೈನ್ ಕ್ಲಾಸ್ ಆರಂಭಿಸಿದೆ. ಇದರಿಂದ ಗಡಿ ಜಿಲ್ಲೆ ಬೆಳಗಾವಿಯ ಖಾನಾಪುರ ತಾಲೂಕಿನ ಕಾಡಂಚಿನ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ನೀವು ಹೀಗೆ ನೋಡ್ತಿರುವ ಪೋಟೋ, ವಿಡಿಯೋ ಖಾನಾಪುರ ತಾಲೂಕಿನ ವಿದ್ಯಾರ್ಥಿಗಳದ್ದು, ಮೊದಲೇ ಮುಂಗಾರು ಮಳೆ ಒಂದೆಡೆಗೆ ಇನ್ನೊಂದೆಡೆ ಆನಲೈನ್ ಕ್ಲಾಸಗಳು. ಖಾನಾಪುರ ತಾಲೂಕಿನ ಪಶ್ಚಿಮ ಭಾಗದ ಬಹುಪಾಲು ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆಯಿದೆ. ಈ ಗ್ರಾಮ ಮಕ್ಕಳು ಆನಲೈನ್ ಕ್ಲಾಸಗೆ ಅಟೆಂಡ್ ಆಗಬೇಕಂದ್ರೆ ಪಕ್ಕ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗೋವಾದ ಗಡಿ ದಾಟಿ ಬೆಟ್ಟದ ಮೇಲೆ ಹೋಗಬೇಕು. ಆಗ ನೆಟ್ವರ್ಕ್ ಸಿಗುತ್ತದೆ. ಮಳೆಯಲ್ಲಿಯೇ ವಿದ್ಯಾರ್ಥಿಗಳು ಛತ್ರಿ ಹಿಡಿದು ಪಾಠವನ್ನ ಕಲಿಯುವಂತಾಗಿದೆ. ಕಾಡಂಚಿನ ವಿದ್ಯಾರ್ಥಿಗಳ ಸಂಕಷ್ಟವನ್ನ ಸ್ವಯಂ ಕ್ಷೇತ್ರದ ಶಾಸಕಿ ಡಾ.ಅಂಜಲಿ ನಿಂಬಾಳಕರ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಟೋ, ವಿಡಿಯೋ ಗಳನ್ನ ಹಾಕಿ ಟ್ವಿಟ್ ಮಾಡಿದ್ದಾರೆ. ಆನಲೈನ್ ಕ್ಲಾಸಗಾಗಿ ವಿದ್ಯಾರ್ಥಿಗಳು ಪರದಾಡುತ್ತಿದ್ದರು ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ.
ಮೊಬೈಲ್ ನೆಟ್ವರ್ಕ್ ಗಾಗಿ ಪಕ್ಕದ ರಾಜ್ಯದ ಗಡಿಯೊಳಗೆ ವಿದ್ಯಾರ್ಥಿಗಳು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದ ಗಡಿಯಲ್ಲಿ ಇರುವ ಗ್ರಾಮದಲ್ಲಿ ನೆಟ್ವರ್ಕ್ ಇಲ್ಲ. ಇದರಿಂದ ಖಾನಾಪೂರ ತಾಲೂಕಿನ ಪಶ್ಚಿಮ ಭಾಗದ ಮಾನ,ಸಡಾ, ಪಾರವಾಡ ಸೇರಿ ಹಲವಾರು ಹಳ್ಳಿಗಳ ವಿದ್ಯಾರ್ಥಿಗಳಿಗ ಪರದಾಡುತ್ತಿದ್ದಾರೆ. ನೆಟ್ವರ್ಕ್ ಸಮಸ್ಯೆ ಬಗ್ಗೆ ವಿದ್ಯಾರ್ಥಿಗಳೇ
ಖಾನಾಪೂರ ಕ್ಷೇತ್ರದ ಶಾಸಕಿ
ಡಾ. ಅಂಜಲಿ ನಿಂಬಾಳ್ಕರ್ ಗಮನಕ್ಕೆ ತಂದಿದ್ದಾರೆ. ತಕ್ಷಣವೇ
ಆನಲೈನ ಕ್ಲಾಸಗೆ ನೆಟ್ವರ್ಕ್ ಸಮಸ್ಯೆ ಬಗ್ಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಟ್ವಿಟ್ ಮಾಡಿ ಅಧಿಕಾರಿಗಳ ವಿರುದ್ಧ ಟ್ವಿಟ್ ಕಿಡಿಕಾರಿದ್ದಾರೆ. ತಕ್ಷಣವೇ ಸರ್ಕಾರ ಕಾಡಂಚಿನ ವಿದ್ಯಾರ್ಥಿಗಳಿಗೆ ಎದುರಾಗಿರುವ ನೆಟ್ವರ್ಕ್ ಸಮಸ್ಯೆ ನಿವಾರಿಸುವಂತೆ ಗ್ರಾಮ ಪಂಚಾಯತಿ ಸದಸ್ಯ ಖಾಶೀಮ್ ಹಟ್ಟಿಹೋಳಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.