ಕೊನೆಗೂ ಆಸ್ಪತ್ರೆಗೆ ದಾಖಲಾದ ನಟ ದರ್ಶನ್: ಯಾವ ಆಸ್ಪತ್ರೆ, ಇಲ್ಲಿದೆ ಡೀಟೈಲ್ಸ್ (Video)

Krishnaveni K

ಶುಕ್ರವಾರ, 1 ನವೆಂಬರ್ 2024 (16:44 IST)
Photo Credit: X
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ನಟ ದರ್ಶನ್ ಇಂದು ಬೆನ್ನು ನೋವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರು.

ಮೊನ್ನೆಯಷ್ಟೇ ದರ್ಶನ್ ಗೆ ಮಧ್ಯಂತರ ಜಮೀನು ಸಿಕ್ಕಿತ್ತು. ಇದಾದ ಬಳಿಕ ನೇರವಾಗಿ ಅವರು ತಮ್ಮ ಪತ್ನಿ ವಾಸವಿರುವ ಹೊಸಕೆರೆಹಳ್ಳಿಯ ಅಪಾರ್ಟ್ ಮೆಂಟ್ ಗೆ ತೆರಳಿದ್ದರು. ಎರಡು ದಿನ ಅಲ್ಲಿಯೇ ಉಳಿದುಕೊಂಡಿದ್ದ ಅವರು ಈಗ ಕೊನೆಗೂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರು ಇಂದು ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾದರು. ಇಂದು ಅಪರಾಹ್ನ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಜೊತೆ ಪತ್ನಿ ವಿಜಯಲಕ್ಷ್ಮಿ ಹಾಗೂ ಸ್ನೇಹಿತ, ನಟ ಧನ್ವೀರ್ ಗೌಡ ಕೂಡಾ ಬಂದಿದ್ದಾರೆ. ದರ್ಶನ್ ಬರುತ್ತಾರೆಂದು ತಿಳಿದು ಆಸ್ಪತ್ರೆ ಸುತ್ತ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಹೀಗಾಗಿ ಅವರನ್ನು ನಿಯಂತ್ರಿಸಲು ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಹೈಕೋರ್ಟ್ ಅವರಿಗೆ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿದೆ. ಅದರ ಪ್ರಕಾರ ಅವರ ಒಂದು ವಾರದೊಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಬಗ್ಗೆ ಕೋರ್ಟ್ ಗೆ ವರದಿ ಸಲ್ಲಿಸಬೇಕಿದೆ. ಬಳ್ಳಾರಿಯಲ್ಲಿ ವೈದ್ಯರು ತಪಾಸಣೆ ನಡೆಸಿ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದಿದ್ದರು. ಇದೀಗ ಬಿಜಿಎಸ್ ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ನಡೆಸಿ ಯಾವ ವರದಿ ನೀಡುತ್ತಾರೆ ಎಂದು ಕಾದುನೋಡಬೇಕಿದೆ. ಆ ವಿವರಗಳನ್ನು ಅವರು ಕೋರ್ಟ್ ಗೆ ಸಲ್ಲಿಸಬೇಕಾಗುತ್ತದೆ.

ಆಸ್ಪತ್ರೆಗೆ ಬರುತ್ತಿದ್ದಂತೆ ಬಾಸ್ ನೋಡಲು ಮುಗಿ ಬಿದ್ದ ಸೆಲೆಬ್ರಿಟಿಗಳು ????❤️????#DBoss ???? #BossOfSandalwood #DevilTheHero #Navagraha #NavagrahaReRelease pic.twitter.com/TP8lulEPxF

— Thoogudeepa Team - R (@DTEAM7999) November 1, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ