ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೆಲವು ದಿನಗಳ ಮೊದಲು ಮೃಗಾಲಯಗಳಲ್ಲಿನ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲು ಕರೆ ನೀಡಿದ್ದಕ್ಕೆ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಓಗೊಟ್ಟಿದ್ದರು.
ಈಗ ದರ್ಶನ್ ಕೈಯಿಂದಲೇ ಮೈಸೂರು ಮೃಗಾಲಯದ ಅಧಿಕಾರಿಗಳು ದತ್ತು ಪತ್ರ ಕೊಡಿಸಿದ್ದಾರೆ. ದರ್ಶನ್ ಕರೆಗೆ ಓಗೊಟ್ಟು ಸುಮಾರು 800 ಕ್ಕೂ ಹೆಚ್ಚು ಜನ ಪ್ರಾಣಿಗಳ ದತ್ತು ಸ್ವೀಕಾರ ಮಾಡಿದ್ದರು.
ದರ್ಶನ್ ಕರೆಗೆ ಓಗೊಟ್ಟು ಸಮರೋಪಾದಿಯಲ್ಲಿ ಜನ ಹಣ ಒಟ್ಟುಗೂಡಿಸಿದ್ದರು. ಇದೀಗ ಅವರಿಗೆಲ್ಲಾ ತಮ್ಮ ಕೈಯಾರೆ ದತ್ತು ಪತ್ರ ಕೊಡಿಸಿ ದರ್ಶನ್ ಕೃತಜ್ಞತೆ ಸಲ್ಲಿಸಿದ್ದಾರೆ.