ಅಭಿಷೇಕ್ ಅಂಬರೀಶ್ ಗೆ ಹೊಸ ಬಿರುದು ಕೊಟ್ಟ ಡಿ ಬಾಸ್ ದರ್ಶನ್
ಬಳಿಕ ಮಾತನಾಡಿದ ಅವರು ನಿರ್ದೇಶಕ ದುನಿಯಾ ಸೂರಿ ಮತ್ತು ಅಭಿಷೇಕ್ ಅಂಬರೀಶ್ ಬಗ್ಗೆ ಹೊಗಳಿಕೆಯ ಮಾತನಾಡಿದ್ದಾರೆ. ಸೂರಿ ಗರಡಿಯಲ್ಲಿ ಅಭಿಷೇಕ್ ಚೆನ್ನಾಗಿ ಪಳಗಿದ್ದಾರೆ ಎಂದು ಹೊಗಳಿದ್ದಾರೆ. ಜೊತೆಗೆ ಪ್ರೀತಿಯ ತಮ್ಮ ಅಭಿಗೆ ಹೊಸ ಬಿರುದನ್ನೂ ಕೊಟ್ಟಿದ್ದಾರೆ.
ಮೊದಲ ಸಿನಿಮಾಕ್ಕಿಂತ ಈ ಸಿನಿಮಾದಲ್ಲಿ ಅಭಿಷೇಕ್ ಬದಲಾಗಿದ್ದಾರೆ. ಅವರ ಆಕ್ಟಿಂಗ್ ಸ್ಕಿಲ್ ಬದಲಾಗಿದೆ. ಇದಕ್ಕೆ ಸೂರಿಯವರೇ ಕಾರಣ. ಇನ್ನು ಮುಂದೆ ಅವನನ್ನು ಯಂಗ್ ರೆಬಲ್ ಸ್ಟಾರ್ ಎನ್ನಬೇಡಿ, ರಿಯಲ್ ರೆಬಲ್ ಸ್ಟಾರ್ ಎನ್ನಬೇಕು ಎಂದಿದ್ದಾರೆ ದರ್ಶನ್.