ಸರ್ಜರಿ ಮಾಡಿಸಿಕೊಳ್ಳುವ ಹೊತ್ತಿನಲ್ಲಿ ಆಸ್ಪತ್ರೆಯಲ್ಲಿ ನಟ ದರ್ಶನ್ ಹೈಡ್ರಾಮ

Krishnaveni K

ಗುರುವಾರ, 12 ಡಿಸೆಂಬರ್ 2024 (10:42 IST)
ಬೆಂಗಳೂರು: ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಒಂದು ತಿಂಗಳು ಕಳೆದರೂ ದರ್ಶನ್ ಆಪರೇಷನ್ ಮಾಡಿಸಿಕೊಂಡಿಲ್ಲ. ನಿನ್ನೆ ದಿನವೂ ಆಪರೇಷನ್ ಮಾಡಿಸದೇ ದರ್ಶರ್ ಹೈಡ್ರಾಮಾ ಮಾಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ನಟ ದರ್ಶನ್ ಗೆ ತೀವ್ರ ಬೆನ್ನು ನೋವಿದ್ದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಇದ್ದರೆ ಲಕ್ವ ಹೊಡೆಯುವ ಸಾಧ್ಯತೆಯಿದೆ ಎಂದೆಲ್ಲಾ ಹೇಳಿದ ಕಾರಣಕ್ಕೆ ಹೈಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಇಷ್ಟು ದಿನ ಕಳೆದರೂ ದರ್ಶನ್ ಆಪರೇಷನ್ ಮಾಡಿಸಿಕೊಂಡಿಲ್ಲ.

ಹೀಗಾಗಿ ಇದೆಲ್ಲಾ ಜಾಮೀನಿಗಾಗಿ ಮಾಡುತ್ತಿರುವ ನಾಟಕವೇ ಎಂಬ ಅನುಮಾನ ಮೂಡಿದೆ. ಈ ನಡುವೆ ಕೋರ್ಟ್ ಕೂಡಾ ಆಪರೇಷನ್ ಯಾಕೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದೆ. ಇದಕ್ಕೆ ಅವರ ಬಿಪಿ ವೇರಿಯೇಷನ್ ಆಗುತ್ತಿದೆ. ಈ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮುಂದೂಡಲಾಗಿದೆ ಎಂದು ಅವರ ಪರ ವಕೀಲರು ನೆಪ ನೀಡಿದ್ದರು.

ನಿನ್ನೆ ದರ್ಶನ್ ಗೆ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ವರದಿಯಾಗಿತ್ತು. ಆದರೆ ಮತ್ತೆ ದರ್ಶನ್ ಹೈಡ್ರಾಮಾ ಮಾಡಿದ್ದು ಆಪರೇಷನ್ ಗೆ ಒಪ್ಪಿಲ್ಲವೆಂದು ವರದಿಗಳಿವೆ. ಹಾಗಿದ್ದರೂ ಅವರ ಚಿಕಿತ್ಸೆ ಬಗ್ಗೆ ಮಾಧ್ಯಮಗಳಿಗೆ ಯಾವುದೇ ವಿಚಾರ ಗೊತ್ತಾಗದಂತೆ ಗೌಪ್ಯತೆ ಕಾಪಾಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ