ಡಿ ಬಾಸ್ ದರ್ಶನ್ ಕ್ರಾಂತಿ ಲುಕ್ ವೈರಲ್

ಗುರುವಾರ, 21 ಏಪ್ರಿಲ್ 2022 (07:59 IST)
ಬೆಂಗಳೂರು: ಕ್ರಾಂತಿ ಸಿನಿಮಾಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಿಮ್ ನಲ್ಲಿ ಬೆವರು ಹರಿಸುತ್ತಿದ್ದು, ಅವರ ಲೇಟೆಸ್ಟ್ ಫೋಟೋ ಈಗ ವೈರಲ್ ಆಗಿದೆ.

ಕ್ರಾಂತಿ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ದರ್ಶನ್ ಜಿಮ್ ನಲ್ಲಿ ಬೆವರು ಹರಿಸುತ್ತಿರುವ ಫೋಟೋವನ್ನು ಹರಿಯಬಿಡಲಾಗಿದೆ. ಇದನ್ನು ನೋಡಿದ ಬಳಿಕ ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಶುರು ಮಾಡಿದ್ದಾರೆ.

ಸದ್ಯಕ್ಕೆ ಕ್ರಾಂತಿ ಮುಕ್ಕಾಲು ಭಾಗ ಶೂಟಿಂಗ್ ಮುಗಿಸಿದ್ದು, ಹೈದರಾಬಾದ್ ನಲ್ಲಿ ಪ್ರಮುಖ ಭಾಗದ ಚಿತ್ರೀಕರಣ ನಡೆಯಬೇಕಿದೆ. ಕ್ರಾಂತಿ ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ