ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಮುಂಬರುವ ಕ್ರಾಂತಿ ಸಿನಿಮಾಗೆ ಮೊದಲು ಕುಟುಂಬ ಸಮೇತರಾಗಿ ಬ್ರೇಕ್ ಪಡೆದುಕೊಂಡಿದ್ದಾರೆ.
ಪತ್ನಿ ವಿಜಯಲಕ್ಷ್ಮಿ, ಪುತ್ರನ ಜೊತೆಗೆ ಕಬಿನಿಯಲ್ಲಿ ವಿಹಾರ ನಡೆಸುತ್ತಿರುವ ದರ್ಶನ್ ರಜಾ ಮೂಡ್ ನಲ್ಲಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಅರಣ್ಯ ಸುತ್ತಾಟ ನಡೆಸುವ ದರ್ಶನ್ ಈ ಬಾರಿ ಸಂಸಾರ ಸಮೇತ ಭೇಟಿ ಕೊಟ್ಟಿದ್ದಾರೆ.
ಇನ್ನು, ದರ್ಶನ್ ಕಬಿನಿ ಪ್ರದೇಶಕ್ಕೆ ಭೇಟಿ ಕೊಟ್ಟ ಹಿನ್ನಲೆಯಲ್ಲಿ ಅಭಿಮಾನಿಗಳು ಮುತ್ತಿಕೊಂಡು ತಮ್ಮ ಮೆಚ್ಚಿನ ನಟನ ಜೊತೆ ಸೆಲ್ಫೀಗಾಗಿ ಮುಗಿಬಿದ್ದರು.