ನಾಲ್ಕು ದಿನಕ್ಕೆ ನಲ್ವತ್ತು ಕೋಟಿ ಕಲೆಕ್ಷನ್: ಕೋಟಿಗೊಬ್ಬ 3 ಸಾಧನೆಗೆ ಖುಷಿಯಾದ ಕಿಚ್ಚ

ಮಂಗಳವಾರ, 19 ಅಕ್ಟೋಬರ್ 2021 (17:13 IST)
ಬೆಂಗಳೂರು: ಆರಂಭಿಕ ವಿಘ್ನದ ಹೊರತಾಗಿಯೂ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಥಿಯೇಟರ್ ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.
Photo Courtesy: Twitter


ಬಿಡುಗಡೆಯಾದ ನಾಲ್ಕು ದಿನಕ್ಕೆ 40.50 ಕೋಟಿ ರೂ. ಸಂಪಾದನೆ ಮಾಡಿದೆ. ವಿವಾದಗಳಾದರೂ ಕೊನೆಗೆ ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಯಶಸ್ವಿಯಾಗಿರುವುದು ಕಿಚ್ಚ ಸುದೀಪ್ ಮೊಗದಲ್ಲಿ ಸಂತಸ ಮೂಡಿಸಿದೆ. ಇದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಇನ್ನು, ತೆಲುಗಿನಲ್ಲೂ ಕೋಟಿಗೊಬ್ಬ 3 ಸಿನಿಮಾ ‘ಕೋಟಿಕೊಕ್ಕಡು’ ಎಂಬ ಟೈಟಲ್ ನಲ್ಲಿ ತೆರೆ ಕಾಣಲಿದ್ದು, ಇಂದು ಟ್ರೈಲರ್ ಬಿಡುಗಡೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ