ಡಿ ಬಾಸ್ ದರ್ಶನ್ ಪತ್ನಿ, ಪುತ್ರನ ಜತೆಗಿನ ಫೋಟೋ ನೋಡಕ್ಕೆ ಎರಡು ಕಣ್ಣು ಸಾಲದು!

ಗುರುವಾರ, 2 ಜನವರಿ 2020 (11:04 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜತೆ ಚೆನ್ನಾಗಿಲ್ಲ ಎಂಬ ಸುದ್ದಿ ಹಬ್ಬುತ್ತಿರುವವರಿಗೆ ಟಾಂಗ್ ಕೊಡುವ ರೀತಿಯಲ್ಲಿ ಹೊಸ ವರ್ಷದ ಮೊದಲ ದಿನ ಇವರಿಬ್ಬರೂ ಖುಷಿಯಾಗಿರುವ ಕ್ಷಣದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಮತ್ತು ನಿರ್ಮಾಪಕಿ ಶೈಲಜಾ ನಾಗ್, ಸಂಗೀತ ನಿರ್ದೇಶಕ ಹರಿಕೃಷ್ಣ ಜತೆಗಿನ ಸುಂದರ ಸೆಲ್ಫೀ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ರಾಬರ್ಟ್ ಡಬ್ಬಿಂಗ್ ಸಂದರ್ಭದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಪಾರ್ಟಿಯಲ್ಲಿ ತೆಗೆದ ಚಿತ್ರ.

ಈ ಫೋಟೋದಲ್ಲಿ ಗಂಡ-ಹೆಂಡತಿ ಜತೆಗಿರುವುದನ್ನು ನೋಡಿ ಕಾಮೆಂಟ್ ಮಾಡಿರುವ ದರ್ಶನ್ ಅಭಿಮಾನಿಗಳು ‘ಅಣ್ಣ-ಅತ್ತಿಗೆ ಜತೆಗಿರುವುದನ್ನು ನೋಡಲು ಎರಡು ಕಣ್ಣು ಸಾಲದು’ ಎನ್ನುತ್ತಿದ್ದಾರೆ. ಇನ್ನು ಕೆಲವರು ಅತ್ತಿಗೆ ಜತೆ ಅಪರೂಪದ ಫೋಟೋ ಬಾಸ್ ಸೂಪರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ