ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ಅಭಿಮಾನಿಗಳು ತರಲಿರುವ ಕೇಕ್ ತೂಕ ಕೇಳಿದರೆ ಬೆರಗಾಗುತ್ತೀರಿ!

ಗುರುವಾರ, 2 ಜನವರಿ 2020 (10:25 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಇನ್ನು ಆರೇ ದಿನ ಬಾಕಿ. ಜನವರಿ 8 ರಂದು ಜನ್ಮದಿನ ಆಚರಿಸಿಕೊಳ್ಳಲಿರುವ ತಮ್ಮ ನೆಚ್ಚಿನ ನಾಯಕನಿಗಾಗಿ ಅಭಿಮಾನಿಗಳು ವಿಶೇಷ ಸಂಭ್ರಮಾಚರಣೆ ಮಾಡಲಿದ್ದಾರೆ.


ಯಶ್ ಬರ್ತ್ ಡೇಗೆ ಅವರ ಅಭಿಮಾನಿಗಳು ಬೃಹತ್ ಕೇಕ್ ತಯಾರು ಮಾಡಿಸಲಿದ್ದಾರೆ. ಈ ಕೇಕ್ ತೂಕ ಬರೋಬ್ಬರಿ 5000  ಕೆಜಿ ತೂಕವಿರಲಿದೆ ಎಂದು ಅಭಿಮಾನಿ ಬಳಗ ಹೇಳಿಕೊಂಡಿದ್ದಾರೆ.

ಯಶ್ ಅಭಿಮಾನಿ ವಿನು ಗೌಡ ಎಂಬವರು ವಿಶೇಷ ಆಸ್ಥೆ ವಹಿಸಿ ಕೇಕ್ ಡಿಸೈನ್ ಮಾಡಿದ್ದಾರಂತೆ. ಈ ಮೂಲಕ ವಿಶ್ವದ ಯಾವ ನಾಯಕ ನಟನಿಗೂ ಇಲ್ಲದ ಬರ್ತ್ ಡೇ ಸಂಭ್ರಮ ಆಚರಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ