ಜಗ್ಗೇಶ್ ಗೆ ಟ್ವಿಟರ್ ನಲ್ಲೇ ಪ್ರತಿಕ್ರಿಯಿಸಿದ ಡಿ ಬಾಸ್ ದರ್ಶನ್

ಸೋಮವಾರ, 15 ಫೆಬ್ರವರಿ 2021 (09:46 IST)
ಬೆಂಗಳೂರು: ಅಭಿಮಾನಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿ ವಿವಾದಕ್ಕೊಳಗಾದ ಬಳಿಕ ನವರಸನಾಯಕ ಜಗ್ಗೇಶ್ ಗೆ ಡಿ ಬಾಸ್ ದರ್ಶನ್ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.


ಜಗ್ಗೇಶ್ ದರ್ಶನ್ ರ ಬರ್ತ್ ಡೇ ಸಿಡಿಪಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ದರ್ಶನ್ ಥ್ಯಾಂಕ್ಸ್ ಎ ಲಾಟ್ ಎಂದಿದ್ದಾರೆ. ಜಗ್ಗೇಶ್ ಗೆ ದರ್ಶನ್ ಪ್ರತಿಕ್ರಿಯೆ ನೀಡಿರುವುದು ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ಹೊರಗಡೆ ಏನೇ ವಿವಾದವಾದರೂ ಇಬ್ಬರ ಸಂಬಂಧಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದು ಖುಷಿಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ