ರಾಕಿಂಗ್ ಸ್ಟಾರ್ ಯಶ್ ಜತೆ ಆಕ್ಟ್ ಮಾಡಲ್ಲ ಎಂದು ದರ್ಶನ್ ಹೇಳಿದ್ದೇಕೆ?

ಬುಧವಾರ, 11 ಡಿಸೆಂಬರ್ 2019 (09:38 IST)
ಬೆಂಗಳೂರು: ಸುಮಲತಾ ಅಂಬರೀಶ್ ಸಂಸದೆಯಾಗಿ ಚುನಾವಣೆ ನಿಂತಾಗ ಜೋಡೆತ್ತುಗಳು ಎಂದು ಹೇಳಿಕೊಂಡು ಒಟ್ಟಿಗೇ ಪ್ರಚಾರ ನಡೆಸಿದವರು ರಾಕಿಂಗ್ ಸ್ಟಾರ್ ಯಶ್ ಮತ್ತು ಡಿ ಬಾಸ್ ದರ್ಶನ್. ಅಷ್ಟೇ ಏಕೆ ಮೊನ್ನೆ ಐರಾ ಯಶ್ ಬರ್ತ್ ಡೇ ಸಮಾರಂಭಕ್ಕೂ ದರ್ಶನ್ ಆಗಮಿಸಿ ತಮ್ಮಿಬ್ಬರ ಸ್ನೇಹ ಇನ್ನೂ ಗಟ್ಟಿಯಾಗಿದೆ ಎಂದು ಸಾರಿದ್ದರು.


ಆದರೆ ಯಶ್ ಜತೆ ಸಿನಿಮಾ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಮಾತ್ರ ದರ್ಶನ್ ಆಕ್ಟ್ ಮಾಡಲ್ಲ ಎಂದಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ದರ್ಶನ್ ನಾನು ಯಶ್ ಜತೆ ಆಕ್ಟ್ ಮಾಡಲ್ಲ ಎಂದಿದ್ದು ಮಾತ್ರವಲ್ಲದೆ, ಅದಕ್ಕೆ ಕಾರಣವನ್ನೂ ತಿಳಿಸಿದ್ದಾರೆ.

‘ನಮ್ಮಿಬ್ಬರನ್ನೂ ಒಂದೇ ಫಿಲಂನಲ್ಲಿ ಹಾಕಿಕೊಂಡು ಹ್ಯಾಂಡಲ್ ಮಾಡಬಹುದಾದ ನಿರ್ದೇಶಕರು, ನಿರ್ಮಾಪಕರು ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಯಾರೂ ಇಲ್ಲ. ನಮಗೆ ಇಬ್ಬರಿಗೂ ನಮ್ಮದೇ ಆದ ಫ್ಯಾನ್ ಫಾಲೋವರ್ಸ್ ಇದ್ದಾರೆ. ಹೀಗಾಗಿ ನಾವಿಬ್ಬರೂ ಒಟ್ಟಿಗೆ ನಟಿಸುವಾಗ ನಮ್ಮಿಬ್ಬರ ಕ್ಯಾರೆಕ್ಟರ್ ಗಳಿಗೂ ಸಮಾನ ಅವಕಾಶಗಳಿರಬೇಕು. ಇಲ್ಲವಾದರೆ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಾರೆ. ಸುಮ್ಮನೇ ವಿವಾದಗಳು ಹುಟ್ಟಿಕೊಳ್ಳುತ್ತವೆ. ಅದಕ್ಕೇ ಆಕ್ಟ್ ಮಾಡಲ್ಲ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ