ವಾಹನ ಬೆನ್ನಟ್ಟಿ ಬಂದ ಅಭಿಮಾನಿಗೆ ಬೈದ ಡಿ ಬಾಸ್ ದರ್ಶನ್
ಇದನ್ನು ಗಮನಿಸಿದ ದರ್ಶನ್ ಆ ಅಭಿಮಾನಿಗಳಿಗೆ ಬೈದು, ಹೀಗೆಲ್ಲಾ ಮಾಡಬೇಡಿ ಎಂದು ಬುದ್ಧಿ ಮಾತು ಹೇಳಿದ್ದಾರೆ. ಈ ಹಿಂದೆಯೂ ಒಮ್ಮೆ ದರ್ಶನ್ ನೇರವಾಗಿ ಈ ರೀತಿ ಮಾಡುವ ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದರು. ಇದರಿಂದ ಅಪಘಾತದ ಅಪಾಯವಿದೆ. ನನ್ನ ಮೇಲಿನ ಅಭಿಮಾನಕ್ಕೆ ಈ ರೀತಿ ಅಪಾಯ ತಂದುಕೊಳ್ಳುವ ಮುನ್ನ ನಿಮ್ಮ ಕುಟುಂಬದವರ ಬಗ್ಗೆ ಯೋಚಿಸಿ ಎಂದು ದರ್ಶನ್ ಹೇಳಿದ್ದರು. ಹಾಗಿದ್ದರೂ ಕೆಲವು ಹುಚ್ಚು ಅಭಿಮಾನಿಗಳು ತಮ್ಮ ಖಯಾಲಿ ಬಿಟ್ಟಿಲ್ಲ.