ಮಗನ ಜತೆ ಡಿ ಬಾಸ್ ದರ್ಶನ್ ಕುದುರೆ ಸವಾರಿ ವಿಡಿಯೋ ವೈರಲ್

ಶುಕ್ರವಾರ, 3 ಜನವರಿ 2020 (11:02 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುವಿದ್ದಾಗಲೆಲ್ಲಾ ತಮ್ಮ ಫಾರ್ಮ್ ಹೌಸ್ ನಲ್ಲಿ ಮೆಚ್ಚಿನ ಪ್ರಾಣಿಗಳ ಜತೆ ಕಾಲ ಕಳೆಯುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ.


ಇದೀಗ ಡಿ ಬಾಸ್ ತಮ್ಮ ಮಗ ವಿನೀಶ್ ಜತೆಗೆ ಫಾರ್ಮ್ ಹೌಸ್ ನಲ್ಲಿ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಮೈಸೂರಿನ ತೋಟದ ಮನೆಯಲ್ಲಿ ಮಗನ ಜತೆ ಕಾಲ ಕಳೆಯುತ್ತಿರುವ ಡಿ ಬಾಸ್ ಬಿಡುವಿನ ವೇಳೆಯಲ್ಲಿ ಕುದುರೆ ಸವಾರಿ ಹೇಳಿಕೊಡುವ ದೃಶ್ಯ ವೈರಲ್ ಆಗಿದೆ.

ತೋಟದ ಮನೆಯಲ್ಲಿ ದರ್ಶನ್ ತಮ್ಮ ಮೆಚ್ಚಿನ ಕುದುರೆಯನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ. ಬಿಡುವಿದ್ದಾಗಲೆಲ್ಲಾ ಕುದುರೆ ಸವಾರಿ ಮಾಡುವುದೆಂದರೆ ದರ್ಶನ್ ಗೆ ಅಚ್ಚುಮೆಚ್ಚು. ಅದನ್ನೇ ಮಗನಿಗೂ ಕಲಿಸುತ್ತಿದ್ದಾರೆ ಡಿ ಬಾಸ್.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ