ಬೆಂಗಳೂರು: ಜೈಲಿನಲ್ಲಿ ನರಕ ದರ್ಶನ ಅನುಭವಿಸುತ್ತಿರುವ ನಟ ದರ್ಶನ್ ಈಗ ನ್ಯಾಯಾಧೀಶರ ಮುಂದೆ ಶಾಕಿಂಗ್ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಇಂದು ನಟ ದರ್ಶನ್ ಹಾಸಿಗೆ, ದಿಂಬು ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಇಂದು ನ್ಯಾಯಾಧೀಶರ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಹಾಜರಾಗಿದ್ದಾರೆ. ಈ ವೇಳೆ ದರ್ಶನ್ ಗೆ ಮಾತನಾಡಲು ನ್ಯಾಯಾಧೀಶರು ಅವಕಾಶ ಮಾಡಿಕೊಡುತ್ತಾರೆ.
ಈ ಸಂದರ್ಭದಲ್ಲಿ ದರ್ಶನ್ ನನಗೆ ಒಂದು ವಿಚಾರ ಹೇಳುವುದಿದೆ ಎಂದಿದ್ದಾರೆ. ಏನು ಎಂದು ಕೇಳಿದ್ದಕ್ಕೆ ಬಿಸಿಲು ನೋಡಿ ಒಂದು ತಿಂಗಳಾಯಿತು. ನನಗೆ ಸ್ವಲ್ಪ ವಿಷ ಕೊಡಿ ಎಂದು ಬೇಸರದಿಂದಲೇ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಕೈ ಎಲ್ಲಾ ಫಂಗಸ್ ಆಗಿದೆ ಎಂದು ಬೇಸರಿಸಿಕೊಂಡಿದ್ದಾರೆ. ಇನ್ನು ದರ್ಶನ್ ಗೆ ಈ ಸಂದರ್ಭದಲ್ಲಿ ನ್ಯಾಯಾಧೀಶರು ಆ ರೀತಿ ಹೇಳಬಾರದು ಎಂದು ತಿಳಿಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದಲೇ ದರ್ಶನ್ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಯಾವ ಪರಿ ನರಕ ದರ್ಶನ ವಾಗುತ್ತಿದೆ ಎಂದು ತಿಳಿದುಬರುತ್ತದೆ. ಸುಪ್ರೀಂಕೋರ್ಟ್ ನಿರ್ದೇಶನದ ಬಳಿಕ ಜೈಲು ಅಧಿಕಾರಿಗಳು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಇದು ದರ್ಶನ್ ಗೆ ಉಸಿರುಕಟ್ಟಿದಂತಾಗುತ್ತಿದೆ.