ಫ್ಯಾನ್ಸ್ ಗೆ ಖಡಕ್ ಎಚ್ಚರಿಕೆ ಕೊಟ್ಟ ಡಿ ಬಾಸ್ ದರ್ಶನ್

ಸೋಮವಾರ, 1 ಮಾರ್ಚ್ 2021 (09:43 IST)
ಹುಬ್ಬಳ್ಳಿ: ರಾಬರ್ಟ್ ಪ್ರಿ ರಿಲೀಸ್ ಈವೆಂಟ್ ನಲ್ಲಿ ಮಾತನಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆಯೊಂದನ್ನು ಕೊಟ್ಟಿದ್ದಾರೆ.


ತಾವು ಎಲ್ಲಾದರೂ ಕಾರಿನಲ್ಲಿ ತೆರಳುವಾಗ ತಮ್ಮನ್ನು ಬೈಕ್ ನಲ್ಲಿ ಕಿರುಚಾಡಿಕೊಂಡು ಒಂದೇ ಒಂದು ಸೆಲ್ಫಿಗಾಗಿ ಹಿಂಬಾಲಿಸಿಕೊಂಡು ಬರುವ ಫ್ಯಾನ್ಸ್ ಗೆ ದರ್ಶನ್ ಎಚ್ಚರಿಕೆ ಕೊಟ್ಟಿದ್ದಾರೆ. ನಿಮ್ಮನ್ನು ನಂಬಿಕೊಂಡು ಕುಟುಂಬಸ್ಥರು ಇರುತ್ತಾರೆ. ಅವರ ಬಗ್ಗೆ ಯೋಚನೆ ಮಾಡಿ. ನಾನು ಸ್ಪೀಡಾಗಿ ಕಾರಿನಲ್ಲಿ ಹೋಗುವಾಗ ನನ್ನನ್ನು ಹಿಂಬಾಲಿಸಲು ಹೋಗಿ ನೀವು ಅಪಾಯ ಮೈಮೇಲೆಳದುಕೊಳ್ಳಬೇಡಿ. ಬದುಕಿದ್ದರೆ ಮತ್ತೊಮ್ಮೆ ನನ್ನನ್ನು ನೋಡಬಹುದು. ಆದರೆ ಒಂದೇ ಒಂದು ಲೈಕ್, ಕಾಮೆಂಟ್ ಗಾಗಿ ಫೋಟೋ ತೆಗೆಯಲು ಪ್ರಾಣ ಒತ್ತೆಯಿಟ್ಟು ಹಿಂಬಾಲಿಸಬೇಡಿ ಎಂದು ದರ್ಶನ್ ಖಡಕ್ ಆಗಿ ವಾರ್ನ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ