1 ಕೋಟಿ 10 ಲಕ್ಷ ವಂಚನೆ ಮಾಡಿದ ಆರೋಪದ ಮೇಲೆ ದೂರುದಾಖಲಾಗಿದೆ.ನಿರ್ದೇಶಕ ಸಿನಿಮಾ ಚೆನ್ನಾಗಿ ಓಡುತ್ತೆ ಎಂದು ನಿರ್ಮಾಪಕನಿಗೆ ಪ್ರಚೋದನೆ ನೀಡಿದ್ರಂತೆ,ಕಲಾವಿದರಿಗೂ ಹಣ ನೀಡದೆ ಸ್ವಂತಕ್ಕೆ ಹಣ ಬಳಸಿಕೊಂಡಿದ್ದನಂತೆ ,ನಿರ್ಮಾಪಕನ ಚಿತ್ರವನ್ನ ನಿರ್ಮಾಪಕನಿಗೆ ಗೊತ್ತಿಲ್ಲದಂತೆ ಮಾರಾಟಮಾಡಿದ್ದಾನೆ.ನಿರ್ದೇಶಕನ ಕೃತ್ಯಕ್ಕೆ ನಿರ್ಮಾಪಕ ಪೊಲೀಸ್ ಠಾಣೆ ಮೆಟ್ಟಿಲೇರಿದಾನೆ.
ಈಗ 'ಸೂಪರ್ ಸ್ಟಾರ್' ಚಿತ್ರ ಸಂಕಷ್ಟದಲ್ಲಿ ಸಿಲುಕಿದ್ದು.ಸೂಪರ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಾಯಕನಾಗಿ ನಟಿಸಿರೋ ಚಿತ್ರ ಇದ್ದಾಗಿದ್ದು,ನಟ ಉಪೇಂದ್ರ ಅವರ ಸಹೋದರನ ಮಗ ನಿರಂಜನ್ ಸುಧೀಂದ್ರ ನಟಿಸಿರುವ ಚಿತ್ರ ,ಆರ್ ವೆಂಕಟೇಶ್ ಬಾಬು ನಿರ್ದೇಶನದ ಚಿತ್ರ ಸೂಪರ್ ಸ್ಟಾರ್ .ಸೂಪರ್ ಹಿಟ್ ಆಗುತ್ತೆ ಹಣ ಬರುತ್ತೆ ಎಂದು ನಿರ್ಮಾಪಕ ಮೈಲಾರಿಗೆ ಪ್ರಚೋದನೆಯನ್ನ ನಿರ್ದೇಶಕ ನೀಡಿದರಂತೆ,ನಿರ್ದೇಶಕ ವೆಂಕಟೇಶ್ ಬಾಬು ,ಹೊಸ ನಿರ್ಮಾಪಕರಾದ ಸತ್ಯನಾರಾಯಣ , ರಮಾದೇವಿ ವಿರುದ್ಧ ದೂರು ದಾಖಲಾಗಿದೆ.ಮಾತೃಶ್ರಿ ಎಂಟರ್ ಪ್ರೈಸಸ್ ಬ್ಯಾನರ್ ನಡಿ ಮೈಲಾರಿ ಸೂಪರ್ ಸ್ಟಾರ್ ಚಿತ್ರ ಮಾಡ್ತಿದ್ರು.
ಕೋವಿಡ್ ಹಿನ್ನೆಲೆ ಚಿತ್ರೀಕರಣ ಸ್ವಲ್ಪ ದಿನ ಸ್ಥಗಿತಗೊಂಡಿತ್ತು.ನಂತರ ಸತ್ಯನಾರಾಯಣ ಎಂಬುವವರ ಜೊತೆ ಸೇರಿ ಚಿತ್ರದ ಮಾಲೀಕತ್ವವನ್ನೇ ಬದಲಿಸಿದ ಆರೋಪ ಕೇಳಿಬಂದಿತ್ತು.ಈಗ ಹೊಸ ನಿರ್ಮಾಪಕರಾಗಿ ರಮಾದೇವಿ ಹಾಗೂ ಸತ್ಯನಾರಾಯಣ ಅವರನ್ನ ನಿರ್ದೇಶಕ ವೆಂಕಟೇಶ್ ಬಾಬು ಹಾಕಿಕೊಂಡಿದ್ದಾರೆ.ಹಾಕಿದ ಬಂಡವಾಳ ವಾಪಾಸ್ ಕೇಳಲು ಹೋದಾಗ ಪ್ರಾಣಬೆದರಿಕೆ ,ಧಮ್ಕಿ ಹಾಕಿದ್ದಾರೆ.ಹೀಗಾಗಿ ನಿರ್ಮಾಪಕ ಮೈಲಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಹೆಣ್ಣೂರು ದೂರು ನೀಡಲಾಗಿದೆ.