ಮಗಳ ಸಿನಿಮಾ ಮಾಡಲು ಹೊರಟ ಅರ್ಜುನ್ ಸರ್ಜಾಗೆ ಆರಂಭದಲ್ಲೇ ಏಟು: ಹೀರೋ ಜೊತೆ ಮನಸ್ತಾಪ

ಗುರುವಾರ, 10 ನವೆಂಬರ್ 2022 (08:50 IST)
ಹೈದರಾಬಾದ್: ಕನ್ನಡ ಮೂಲದ ಬಹುಭಾಷಾ ನಟ ಅರ್ಜುನ್ ಸರ್ಜಾ ತೆಲುಗಿನಲ್ಲಿ ಮಗಳು ಐಶರ್ಯಾ ಅರ್ಜುನ್ ರನ್ನು ನಾಯಕಿಯಾಗಿ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು.

ಈ ಸಿನಿಮಾದ ಮುಹೂರ್ತ ಕಾರ್ಯಕ್ರಮ ಈಗಾಗಲೇ ನೆರವೇರಿತ್ತು. ವಿಶ್ವಕ್ ಸೇನ್ ನಾಯಕ ಎಂದು ಘೋಷಣೆಯೂ ಆಗಿತ್ತು. ಆದರೆ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಅರ್ಜುನ್ ಸರ್ಜಾ ‘ವಿಶ್ವಕ್ ಸೇನ್ ಗೆ ಬದ್ಧತೆಯಿಲ್ಲ. ಡೇಟ್ಸ್ ನೀಡದೇ ವೃತ್ತಿಪರತೆ ಮರೆತವರಂತೆ ನಡೆದುಕೊಳ್ಳುತ್ತಿದ್ದಾರೆ. ಇಂತಹ ಅನುಭವ ನನಗೆ ಇಷ್ಟು ವರ್ಷದಲ್ಲಿ ಆಗಿರಲಿಲ್ಲ’ ಎಂದೆಲ್ಲಾ ಆರೋಪ ಹೊರಿಸಿದ್ದರು.

ಇದಕ್ಕೀಗ ವಿಶ್ವಕ್ ಸೇನ್ ತಿರುಗೇಟು ನೀಡಿದ್ದು, ನನಗೆ ಬದ್ಧತೆ ಇಲ್ಲ ಎಂದು ಹೇಳಿದರೆ ಚಿತ್ರರಂಗದಿಂದ ಹೊರ ಹೋಗಲೂ ಸಿದ್ಧ. ನಾನು ಹಲವರ ಜೊತೆ ಕೆಲಸ ಮಾಡಿದ್ದೇನೆ. ಪರಿಶ್ರಮದಿಂದ ಕೆಲಸ ಮಾಡುವುದನ್ನು ನಂಬಿದ್ದೇನೆ. ಫಲಿತಾಂಶ ಪ್ರೇಕ್ಷಕರಿಗೆ ಬಿಟ್ಟಿದ್ದು ಎಂದಿದ್ದಾರೆ.

ಇದೀಗ ಅರ್ಜುನ್ ಸರ್ಜಾ ಬೇರೊಬ್ಬ ನಾಯಕನನ್ನು ಹಾಕಿಕೊಂಡು ಮಗಳ ಸಿನಿಮಾ ಮಾಡಲು ತೀರ್ಮಾನಿಸಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ