ರಶ್ಮಿಕಾ ನೋವಿನ ಪತ್ರದ ಕಾರಣ ‘ಕಾಂತಾರ’ ಸಿನಿಮಾ?!

ಗುರುವಾರ, 10 ನವೆಂಬರ್ 2022 (08:20 IST)
ಬೆಂಗಳೂರು: ಮೊನ್ನೆಯಷ್ಟೇ ನಟಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಗರಿಂದ ತಮಗಾಗುತ್ತಿರುವ ನೋವಿನ ಬಗ್ಗೆ ಹಂಚಿಕೊಂಡಿದ್ದರು. ಆದರೆ ರಶ್ಮಿಕಾ ಈ ಪತ್ರಕ್ಕೆ ಕಾರಣ ‘ಕಾಂತಾರ’ ಸಿನಿಮಾ ಎನ್ನಲಾಗಿದೆ.

ರಶ್ಮಿಕಾ ಕಾಂತಾರ ಸಿನಿಮಾ ನೋಡಿಲ್ಲ ಎಂದಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಲಾಗಿತ್ತು. ತಮಗೆ ಮೊದಲ ಅವಕಾಶ ಕೊಟ್ಟ ರಿಷಬ್ ಶೆಟ್ಟಿಯನ್ನೇ ರಶ್ಮಿಕಾ ಮರೆತಿದ್ದಾರೆ ಎಂದು ಟ್ರೋಲಿಗರು ಟೀಕಿಸಿದ್ದರು.

ಈ ಎಲ್ಲಾ ಟೀಕೆಗಳಿಂದ ರಶ್ಮಿಕಾ ಬೇಸತ್ತು ಇಂತಹದ್ದೊಂದು ಸಂದೇಶ ಬರೆದಿದ್ದಾರೆ ಎನ್ನಲಾಗಿದೆ. ನನ್ನ ಕೆಲವು ವಿಚಾರಗಳು ನಿಮಗೆ ಸಹಮತವಿಲ್ಲದಿರಬಹುದು. ಆದರೆ ಹಾಗಂತ ನನ್ನ ಬಗ್ಗೆ ನೆಗೆಟಿವಿಟಿ ಹರಡುವುದು ಎಷ್ಟು ಸರಿ ಎಂದು ರಶ್ಮಿಕಾ ನೋವು ತೋಡಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ